Ad imageAd image

ಬಿಜಿಕೆರೆ ಅರಣ್ಯದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Bharath Vaibhav
ಬಿಜಿಕೆರೆ ಅರಣ್ಯದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
WhatsApp Group Join Now
Telegram Group Join Now

ಮೊಳಕಾಲ್ಮುರು: ಹೊಸಕೆರೆ ಹಳ್ಳದ ಸಮೀಪದ ಬಿಜಿಕೆರೆ ಅರಣ್ಯದಲ್ಲಿ ಅಪರಿಚಿತ ಶವವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಶನಿವಾರ ಮಧ್ಯಾಹ್ನ 12:40ಕ್ಕೆ ಪತ್ತೆಯಾಗಿದೆ.

ಸುಮಾರು 50ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು,ಬಿಳಿ ಪಂಚೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯು ಕೆಂಪು ಬಣ್ಣದ ನಿಕ್ಕರ್ ಧರಿಸಿದ್ದು, ಕೈಗೆ ಕೆಂಪು ಮತ್ತು ಹಳದಿ ಮಿಶ್ರಿತ ದಾರವನ್ನು ಕೈಗೆ ಕಟ್ಟಿಕೊಂಡಿದ್ದಾನೆ.

ಬಿಳಿ ಬಣ್ಣದ ಕೂದಲು ಮೀಸೆ ಹೊಂದಿರುವ ಮೃತ ವ್ಯಕ್ತಿಯು 5.6ಇಂಚು ಎತ್ತರ, ಕಪ್ಪು ಬಣ್ಣ ಹೊಂದಿದ್ದು ಮೃತನ ವಿಳಾಸ ಇವರೆಗೂ ಪತ್ತೆಯಾಗಿಲ್ಲ, ಈ ಘಟನೆ ನಡೆದು ಎರಡು ಅಥವಾ ಮೂರು ದಿನ ಆಗಿರಬಹುದು..ಈ ಬಗ್ಗೆ ಮೊಳಕಾಲ್ಮುರು ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮೃತ ವ್ಯಕ್ತಿಯ ವಿಳಾಸಕ್ಕಾಗಿ ತನಿಖೆ ಮುಂದುವರೆಸಿದ್ದಾರೆ.

ವರದಿ : ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!