Ad imageAd image

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೃತ್ತಿ ಭತ್ಯೆ ನೀಡಲು ಒತ್ತಾಯ

Bharath Vaibhav
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೃತ್ತಿ ಭತ್ಯೆ ನೀಡಲು ಒತ್ತಾಯ
WhatsApp Group Join Now
Telegram Group Join Now

ಸಿರುಗುಪ್ಪ: 2011 ರಿಂದ 2023 ಮಾರ್ಚ್ವರೆಗೆ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ 1972 ರ ಗೌರವಧನ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿ ವತಿಯಿಂದ ಸಿ.ಡಿ.ಪಿ.ಓ ಪ್ರದೀಪ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಸಮಿತಿ ಖಜಾಂಚಿ ಮೇಲ್ಗಡೆ ಖಾಜಾಬೀ ಅವರು ಮಾತನಾಡಿ 1975 ರಲ್ಲಿ ಶಿಶುವಿನಂತಿದ್ದ ಶಿಶು ಅಭಿವೃದ್ದಿ ಯೋಜನೆ ಇಂದು ಹೆಮ್ಮರವಾಗಿ ಬೆಳೆದು ರಾಜ್ಯದಲ್ಲಿಂದು ಸುಮಾರು 50 ಲಕ್ಷ ಫಲಾನುಭವಿಗಳಿದ್ದಾರೆ. ಮಾತ್ರವಲ್ಲದೇ ಮಾನವ ಸಂಪನ್ಮೂಲಗಳ ಬೆಳವಣಿಗೆಗಳನ್ನು ಖಾತ್ರಿ ಪಡಿಸುವ ಯೋಜನೆಯಾಗಿ ಬೆಳಿದಿದೆ.

ಇಂತಹ ಯೋಜನೆಗೆ 75, 150 ರೂಪಾಯಿಯಂತೆ ಸಾವಿರಾರು ಜನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ದುಡಿದಿದ್ದಾರೆ. ಆದ್ದರಿಂದ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಇಲ್ಲಿಯವರೆಗೆ ಅಂದರೆ 2011 ರಿಂದ 2023 ಮಾರ್ಚ್ರವರೆಗೆ ಕಾರ್ಯ ನಿರ್ವಹಿಸಿ ನಿವೃತ್ತಿಯಾದ ಎಲ್ಲಾ ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ನಿವೃತ್ತಿ ಭತ್ಯೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಕಾರ್ಯದರ್ಶಿ ಎಸ್.ಹೆಚ್.ಶಕುಂತಲಾ ಇನ್ನಿತರ ಪದಾಧಿಕಾರಿಗಳಾದ ರಾಜಲಕ್ಷ್ಮಿ, ರಾಜೇಶ್ವರಿ, ಕೆ.ದುರ್ಗಾಭವಾನಿ ಸೇರಿದಂತೆ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!