ಬೀದರ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಅಂಗನವಾಡಿಗಳಲ್ಲಿ ಜಾರಿಗೆ ತಂದಿರುವ ಈಖS ಪದ್ಧತಿಯನ್ನು ಕೈಬಿಡಬೇಕು ಹಾಗೂ ಪೋಷನ್ ಟ್ರಾಕರ್ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಆಗುತ್ತಿರುವ ಮಾನಸಿಕ ದೌರ್ಜನ್ಯ ಹಾಗೂ ಕಿರುಕುಳವನ್ನು ತಪ್ಪಿಸಬೇಕು. ಈಖS ಪದ್ಧತಿಯಿಂದ ಹಲವಾರು ತಾಂತ್ರಿಕ ತೊಂದರೆಗಳು ಎದುರಾಗುತ್ತಿದ್ದು ಫಲಾನುಭವಿಗಳು ಆಹಾರ ಪಡೆಯಲು ಅನಾನುಕೂಲವಾಗುತ್ತಿದೆ ಈಖS ಪದ್ಧತಿಯಲ್ಲಿ ಕೆ.ವೈ.ಸಿ ಧೃಡೀಕರಣ ಓ.ಟಿ.ಪಿ. ನೆಟ್ ವರ್ಕ್ ಸಮಸ್ಯೆಯಿಂದ ತೊಂದರೆಯಾಗುತ್ತಿದ್ದೆ.
ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿರಿಗೆ ಬಿ.ಎಲ್.ಓ. ನೇಮಿಸಿರುವುದನ್ನು ಕೂಡಲೆ ಕೈಬಿಡಬೆಕೆಂದು ಈ ಮನವಿ ಪತ್ರದ ಮೂಲಕ ಕೇಳಿಕೊಳ್ಳುತ್ತೇವೆ. ಏಕೆಂದರೆ ಈಖS ಪದ್ಧತಿಯನ್ನು ಕೈಬಿಡಬೇಕು ಇಂತಹ ತೊಂದರೆಗಳು ಎದುರಾಗುತ್ತಿರುವಾಗ ಸಮಸ್ಯೆಯನ್ನು ಪರಿಹರಿಸುವ ಬದಲು ಕಾರ್ಯಕರ್ತೆಯರಿಗೆ ಶಿಸ್ತು ಕ್ರಮೆ ಗೌರವಧನ ಕಡಿತ ಮಾಡುವುದಾಗಿ ಅಧಿಕಾರಿಗಳು ಬೆದರಿಸುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು.
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (Iಐಔ) ನೀತಿಯಂತೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ ಸಾಮಾಜಿಕ ಭದ್ರತೆಯನ್ನು ಒದಗಿಸುವುದು, ಹಾಗೂ ತಮ್ಮ ಕಚೇರಿಯ ವತಿಯಿಂದ ಕೇವಲ ಆಧಾರ ಕಾರ್ಡ ಮೇಲೆ ವಾಸಸ್ಥಳ ಪ್ರಮಾಣ ಪತ್ರವನ್ನು ನೀಡುತ್ತಿದ್ದು, ಇದಕ್ಕೆ ಜಾತಿಕ್ಕೆ ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ,ಚುನಾವಣೆ ಗುರುತಿನ ಪಡೆದುಕೊಂಡು ಪರಿಶೀಲನೆ ಮಾಡಿ ನೀಡಬೆಕು. ಕೇವಲ ಆಧಾರ ಕಾರ್ಡ ಮೇಲೆ ನಿಡುತಿವುದರಿಂದ ಸ್ಥಳಿಯ ನಿವಾಸಿಗಳಿ ಬಹಳ ಅನ್ಯಾಯವಾಗುತ್ತಿದೆ ಸೂಕ್ತ ಪರಿಶೀಲನೆ ಮಾಡಿ ಸ್ಥಳೀಯ ಅಭ್ಯರ್ಥಿ ನೀಡಲು ಒತ್ತಾಯಿಸುತ್ತೇವೆ. ಹಿಂದಿನ ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿರಿಗೆ ಪ್ರಕ್ರಿಯೆಲ್ಲಿ ಅನ್ಯಾಯ ವಾಗಿದೆ, ಭ್ರಷ್ಟಚಾರವಗಿದೆ. ಆದಕಾರಣ ವಾಸಸ್ಥಳ ಪ್ರಮಾಣ ಪತ್ರವನ್ನು ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಿದ ಮೇಲೆ ನೀಡಬೆಕು.
ಹಾಗೂ ವಾಸಸ್ಥಳ ಪ್ರಮಾಣ ಪತ್ರವನ್ನು ಸ್ಥಳಿಯ ಅಭ್ಯರ್ಥಿಗೆ ಅರ್ಹತೆ ಇದ್ದವರಿಗೆ ಮಾತ್ರ ನೀಡಲು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವತಿಯಿಂದ ಇಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಶ್ರೀಮತಿ ಶಿಲಾಸಾಗರ, ಜಿಲ್ಲಾ ಅಧ್ಯಕ್ಷರಾದ ಚಂದ್ರಕಲಾ ಕಮಠಾಣಕರ್, ಜಿಲ್ಲಾ ಕಾರ್ಯದರ್ಶಿ ಸುಜಾತಾ ಕೆ.ದೊಡ್ಡಿ, ಶ್ರೀಮತಿ ಇಂದುಮತಿ, ಶ್ರೀಮತಿ ಮಂಗಲಾ, ಶ್ರೀಮತಿ ಪಂಚಶೀಲ,ಶ್ರೀಮತಿ ಸಾರಿಕಾ ಕಾಳೆ, ಶ್ರೀಮತಿ ಮಧುಮತಿ, ಶ್ರೀಮತಿ ಸಿದ್ದಮ್ಮ ಸೇರಿದಂತೆ ಇನ್ನಿತ್ತರರು ಇದ್ದರು.
ವರದಿ:ಸಂತೋಷ ಬಿಜಿ ಪಾಟೀಲ




