ಕೊಪ್ಪಳ: ಅಂಗನವಾಡಿ ಮೇಲ್ಛಾವಣಿ ಸೀಲಿಂಗ್ ಬಿದ್ದು 4 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮೆಹಬೂಬ ನಗರದಲ್ಲಿ ನಡೆದಿದೆ.
ಅಮನ್, ಮನ್ವಿತ್, ಮರ್ದನ್, ಸುರಕ್ಷಾ ಗಾಯಗೊಂಡಿರುವ ಮಕ್ಕಳು. ಅಂಗನವಾಡಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ಸೀಲಿಂಗ್ ಬಿದ್ದಿದೆ.ಗಾಯಾಳು ಮಕ್ಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗನವಾಡಿ ಕಟ್ಟಡ ಕಟ್ಟಿ 7 ವರ್ಷಗಳಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.