Ad imageAd image

ಕೊಟ್ಟ ಸಾಲ ಕೇಳಿದ್ದಕ್ಕೆ ನಂದಗಡದ ಅಂಗನವಾಡಿ ಶಿಕ್ಷಕಿ ಕೊಲೆ

Bharath Vaibhav
ಕೊಟ್ಟ ಸಾಲ ಕೇಳಿದ್ದಕ್ಕೆ ನಂದಗಡದ ಅಂಗನವಾಡಿ ಶಿಕ್ಷಕಿ ಕೊಲೆ
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು 5 ಲಕ್ಷ ಹಣ ವಾಪಸ್ ಕೇಳಿದ್ದಕ್ಕೆ ಅಂಗನವಾಡಿ ಶಿಕ್ಷಕಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಖಾನಾಪುರ ತಾಲೂಕಿನ ನಂದಗಡದ ಅಶ್ವಿನಿ ಪಾಟೀಲ್ ಎನ್ನುವ ಅಂಗನವಾಡಿ ಶಿಕ್ಷಕಿಯನ್ನ ಕೊಲೆ ಮಾಡಲಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದ ನಿವಾಸಿ ಎಂದು ತಿಳಿದುಬಂದಿದೆ.

ಅಂಗನವಾಡಿ ಶಿಕ್ಷಕಿ ಅಶ್ವಿನಿ ಜೊತೆಗೆ ಶಂಕರ್ ಪಾಟೀಲ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಆತನಿಗೆ 5 ಲಕ್ಷ ರೂಪಾಯಿ ಸಾಲ ನೀಡಿದ್ದರು.

ಅಶ್ವಿನಿ ಗೌಡ ಬಳಿ 5 ಲಕ್ಷ ರೂಪಾಯಿ ಶಂಕರಗೌಡ ಪಾಟೀಲ್ ಸಾಲ ಪಡೆದಿದ್ದ. ಆದರೆ ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಕೋಪಗೊಂಡಿದ್ದ ಶಂಕರ್ ಪಾಟೀಲ್ ಜಾತ್ರೆಗೆ ಅಂತ ಕರೆದುಕೊಂಡು ಹೋಗಿ ಅಶ್ವಿನಿ ಪಾಟೀಲ್ ಕೊಲೆ ಮಾಡಿದ್ದಾನೆ.

ಇದೀಗ ಪೊಲೀಸರು ಶಂಕರ್ ಪಾಟೀಲ್ ಅನ್ನು ಅರೆಸ್ಟ್ ಮಾಡಿದ್ದಾರೆ. ಅಕ್ಟೋಬರ್ 2 ರಂದು ಹತ್ಯೆಗೈದು ನಾಟಕ ಮಾಡಿದ್ದ. ಕಕ್ಕೇರಿ ಬಿಷ್ಟಾದೇವಿ ಜಾತ್ರೆಗೆ ಅಕ್ಟೋಬರ್ 2ರಂದು ಅಶ್ವಿನಿ ತೆರಳಿದ್ದರು.

ಜಾತ್ರೆಗೆ ಹೋಗಿ ಮನೆಗೆ ಅಶ್ವಿನಿ ವಾಪಸ್ ಬಂದಿಲ್ಲ ಈ ಕುರಿತು ಕುಟುಂಬದವರು ನಂದಗಡ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಕೇಸ್ ದಾಖಲಾದ ನಾಲ್ಕು ದಿನದಲ್ಲಿ ಅರಣ್ಯದಲ್ಲಿ ಅಶ್ವಿನಿ ಶವ ಪತ್ತೆಯಾಗಿದೆ.

ಕಾರವಾರದ ರಾಮನಗರದ ಅರಣ್ಯದಲ್ಲಿ ಮೃತ ದೇಹ ಪತ್ತೆಯಾಗಿದೆ. ಶವ ಪತ್ತೆಯಾಗುತ್ತಿದ್ದಂತೆ ನಂದಗಡ ಕಡೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಜಾತ್ರೆಗೆ ಕರೆದೋಯ್ದ ಶಂಕರ್ ಪಾಟೀಲ್ ಅನ್ನು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿ ಶವ ಬಿಸಾಡಿ ಬಂದಿದ್ದಾಗಿ ತಪ್ಪು ಕೊಂಡಿದ್ದಾನೆ.

ಅಶ್ವಿನಿ ಗಂಡನಿಗೆ 30 ವರ್ಷದಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗ ಕೂಡ ಬೇರೆ ಊರಲ್ಲಿ ಕೆಲಸ ಮಾಡುತ್ತಿದ್ದ. ಶಂಕರ್ ಗೌಡ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ಅಶ್ವಿನಿ ಜೊತೆಗೆ ಸ್ನೇಹ ಬೆಳೆದಿದೆ.

ಮನೆ ಕಟ್ಟುವ ವೇಳೆ ಶಂಕರ್ ಅಶ್ವಿನಿಗೆ ಪರಿಚಯವಾಗಿದ್ದಾನೆ ಅಶ್ವಿನಿಗೆ ಸಹಾಯ ಮಾಡುತ್ತ ಶಂಕರ್ ಹಾಗೆ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ಇಬ್ಬರ ಸ್ನೇಹ ಅಕ್ರಮ ಸಂಬಂಧವರೆಗೂ ಮುಂದುವರೆದಿತ್ತು. ಇದೀಗ 5 ಲಕ್ಷ ಹಣ ವಾಪಸ್ ಹೇಳಿದ್ದಕ್ಕೆ ಶಂಕರ್ ಪಾಟೀಲ್ ಅಶ್ವಿನಿ ಪಾಟೀಲ್ ಅನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!