Ad imageAd image

ಗುಲಾಬಿ ಬಣ್ಣ ಬಳಿದು ಅರೆಬೆತ್ತಲೆ ಫೋಟೋಶೂಟ್ : ಭುಗಿಲೆದ್ದ ಆಕ್ರೋಶ

Bharath Vaibhav
ಗುಲಾಬಿ ಬಣ್ಣ ಬಳಿದು ಅರೆಬೆತ್ತಲೆ ಫೋಟೋಶೂಟ್ : ಭುಗಿಲೆದ್ದ ಆಕ್ರೋಶ
WhatsApp Group Join Now
Telegram Group Join Now

ಪುರ: ರಾಜಸ್ಥಾನದ ಸಾಂಪ್ರದಾಯಿಕ ಮತ್ತು ಪಾರಂಪರಿಕ ನಗರವಾದ ಜೈಪುರದಲ್ಲಿ ನಡೆದ ಫೋಟೋಶೂಟ್ ಒಂದಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ವಿವಾದವೊಂದು ಭುಗಿಲೆದ್ದಿದೆ.

ರಷ್ಯಾದ ಛಾಯಾಗ್ರಾಹಕಿ ಜೂಲಿಯಾ ಬುರುಲೆವಾ ಅವರು ತಮ್ಮ ಕಲಾತ್ಮಕ ಫೋಟೋಶೂಟ್‌ಗಾಗಿ ಜೀವಂತ ಆನೆಗೆ ಗಾಢ ಗುಲಾಬಿ (Bright Pink) ಬಣ್ಣ ಬಳಿದಿರುವುದು ಪ್ರಾಣಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಜೈಪುರಕ್ಕೆ ಭೇಟಿ ನೀಡಿದ್ದ ಜೂಲಿಯಾ, ‘ಪಿಂಕ್ ಸಿಟಿ’ಯ ಸಂಕೇತವಾಗಿ ಆನೆಗೆ ಗುಲಾಬಿ ಬಣ್ಣ ಬಳಿದು ಮಾಡೆಲ್ ಒಬ್ಬರ ಜೊತೆ ಫೋಟೋಶೂಟ್ ನಡೆಸಿದ್ದರು. ಇದರ ವಿಡಿಯೋ ಮತ್ತು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಪ್ರಾಣಿಗಳು ನಿಮ್ಮ ಮೋಜಿನ ವಸ್ತುಗಳಲ್ಲ” (Animals are not props) ಎಂದು ಕಾಮೆಂಟ್ ಮಾಡುವ ಮೂಲಕ ಜನರು ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಕಲೆಯಲ್ಲ, ಬದಲಾಗಿ ‘ಪ್ರಾಣಿ ಹಿಂಸೆ’ ಎಂದು ಹಲವರು ಕಿಡಿಕಾರಿದ್ದಾರೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಪ್ರತಿಕ್ರಿಯಿಸಿದ ಜೂಲಿಯಾ, “ನಾವು ಬಳಸಿದ್ದು ಹಬ್ಬಗಳಲ್ಲಿ ಬಳಸುವ ನೈಸರ್ಗಿಕ ಮತ್ತು ಹಾನಿಕಾರಕವಲ್ಲದ (Organic) ಬಣ್ಣಗಳನ್ನು. ಆನೆಗೆ ಯಾವುದೇ ನೋವು ಉಂಟುಮಾಡಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!