——————————ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತ ಹೋರಾಟಗಾರರ ಪ್ರತಿಭಟನೆ
ಚಿಕ್ಕೋಡಿ: ಕಬ್ಬಿಗೆ ನಿಗದಿತ ಬೆಲೆ ಘೋಷಣೆ ಮಾಡುವಂತೆ ರೈತರ ಪಟ್ಟು.
ನಿನ್ನೆಯಿಂದ ನಿರಂತರ ಧರಣಿ ನಡೆಸಿದ ರೈತ ಹೋರಾಟಗಾರರು.
ಪ್ರತೀ ಟನ್ ಕಬ್ಬಿಗೆ 3500 ರೂ. ಘೋಷಣೆ ಮಾಡುವಂತೆ ರೈತರ ಆಗ್ರಹ.
ರಾಜ್ಯ ಹೆದ್ದಾರಿ ತಡೆದು ಸಾವಿರಾರು ರೈತರಿಂದ ಪ್ರಭಟನೆ ಧರಣಿ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಟೌಧಿ ಘಾಟ್ ಬಳಿ ಪ್ರತಿಭಟನೆ.
Nh 4 ನಿಪ್ಪಾಣಿ ರಾಜ್ಯ ಹೆದ್ದಾರಿ ಮೇಲೆ ಕುಳಿತು ಧರಣಿ.
ರಸ್ತೆ ಮೇಲೆ ಮಧ್ಯದಲ್ಲೇ ವೇದಿಕೆ ನಿರ್ಮಿಸಿ ಭಾಷಣ ಮಾಡುತ್ತಾ ಹೋರಾಟ.
ಅನ್ನದಾತರು.
ಪ್ರತಿಭಟನೆಗೆ ಮಾಜೀ ಯೋಧರು, ವಕೀಲರು ಸೇರಿದಂತೆ ವಿವಿಧ ಸಂಘಟನೆಗಳು ಸಾಥ ನೀಡಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್.
ರಸ್ತೆಯ ಎರೆಡು ಪಕ್ಕ ಬ್ಯಾರಿಕೇಡ್ ಅಳವಡಿಸಿ, ಕೆಎಸ್ಆರ್ಪಿ ವಾಹನ ನಿಲ್ಲಿಸಿ ಪೊಲೀಸರ ಬಂದೋಬಸ್ತ್.
ರೈತ ಹೋರಾಟಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರ ಬೆಂಬಲ ವ್ಯಕ್ತವಾಗಿತ್ತು.
ರಾಜ್ಯ ರೈತ ಸಂಘಟನೆಯ ಅಧ್ಯಕ್ಷರು ರೈತ ಮುಖಂಡರು ಶ್ರೀನಾಥ್ ಪೂಜಾರಿ, ರಾಜು ಪವಾರ, ಸಂಜು ಅವನ್ನವರ, ರಾಜು ಶೆಟ್ಟಿ, ರಮೇಶ್ ಪಾಟಿಲ್, ಹಾಗೂ ಎಲ್ಲಾ ರೈತ ಹೋರಾಟಗಾರರ ನೇತೃತ್ವದಲ್ಲಿ ಹೋರಾಟ ಕಾರ್ಯ ನಡೆಯಿತು.
ವರದಿ: ರಾಜು ಮುಂಡೆ




