Ad imageAd image

ಚುನಾವಣಾ ಕಾರು ಅಡ್ಡಗಟ್ಟಿ ಆಕ್ರೋಶ : ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ 

Bharath Vaibhav
ಚುನಾವಣಾ ಕಾರು ಅಡ್ಡಗಟ್ಟಿ ಆಕ್ರೋಶ : ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ 
WhatsApp Group Join Now
Telegram Group Join Now

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆ ವಾರ್ಡ್ ನಂ.19ರ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆಯ ಅಖಾಡವಾಗಿದೆ.

ಬಿಜೆಪಿ ಸದಸ್ಯ ಶ್ರೀನಿವಾಸ್ ಸುರಪುರ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥನಕ್ಕೆ ಉಪಚುನಾವಣೆ ಬಿಜೆಪಿಯಿಂದ ನಾಗೇಶ್ ಮೇದಾರ್ ಹಾಗೂ ಕಾಂಗ್ರೆಸ್ ನಿಂದ ರತ್ನಾ ತಳವಾರ ನಾಮಪತ್ರ ಸಲ್ಲಿಸಿದ್ದಾರೆ.

ರತ್ನಾ ತಳವಾರ ನಾಮಪತ್ರ ಸಲ್ಲಿಕೆ ಬಳಿಕ ನಗರಸಭೆ ಮುಂಭಾಗ ಹೈಡ್ರಾಮಾ ನಡೆದಿದೆ. ರತ್ನಾ ತಳವಾರ ಸರಿಯಾಗಿ ನಾಮಪತ್ರ ಭರ್ತಿ ಮಾಡಿಲ್ಲ, ಆದರೂ ಅವರ ನಾಮಪತ್ರವನ್ನು ಅಂಗೀಕಾರ ಮಾಡಲಾಗಿದೆ ಎಂದು ಬಿಜೆಪಿ ಕರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಅಧಿಕರಿ ಕಾರು ತಡೆದು, ಅಧಿಕರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಿ ವಶಕ್ಕೆ ಪಡೆದಿದ್ದಾರೆ. ನ.23ರಂದು ಮತದಾನ ನಡೆಯಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!