ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ತಾಲೂಕು ದಂಡಾಧಿಕಾರಿಗಳ ಕಛೇರಿ ಎದ್ದರುಗಡೆ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ (ರಿ) ವತಿಯಿಂದ ಬಿದರ ಪತ್ರಕರ್ತ ಸುದ್ದಿ ಪ್ರಕಟಿಸಲು ಸ್ಥಳಕ್ಕೆ ಹೋದಾಗ ಅವರ ಮೇಲೆ ಹಲ್ಲೆ ಮಾಡಿರುವ ಅರಣ್ಯ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಗೊಳಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಾಲೂಕ ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು
ಕರ್ನಾಟಕ ಸರಕಾರ,ವಿಧಾನ ಸೌಧ ಬೆಂಗಳೂರು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ ಹಾಗೂ ತಾಲೂಕ ಅಧ್ಯಕ್ಷ ಅನಿಲ ಕುಮಾರ ಬಿರಾದರ ನೇತೃತ್ವದಲ್ಲಿ 15.04.2025 ರಂದು ಸುದ್ದಿ ಪ್ರಕಟಿಸಲು ಬಂದ ಪತ್ರಕರ್ತನ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಬೀದರ ಶಕ್ತಿ ಪತ್ರಿಕೆಯ ಪತ್ರಕರ್ತನಾದ ರವಿ ಬಿ ಬುಸುಂಡಿ ಅವರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ತುಣುಕು ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ತುಣುಕು ಹರದಾಡುತ್ತಿವೆ. ಅಲ್ಲದೆ ಪತ್ರಕರ್ತನು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ನಗರ ತುಂಬಾ ಸುತ್ತಾಡಿಸಿ, ನಿನ್ನ ಜಾತಿ ಯಾವುದು , ನಿನ್ನ ಊರು ಯಾವುದು, ನಿನ್ನ ಹೆಸರೇನು ಎಂದು ಕೇಳಿದಾಗ,ಪತ್ರಕರ್ತ ನನ್ನ ಊರು ಚಿದ್ರಿ, ಎಸ್ಸಿ ಜಾತಿಗೆ ಸೇರಿದವನ್ನು ಎಂದು ತಿಳಿಸಿದಾಗ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿ ಖಾಸಗಿ ಕಾರಿನಲ್ಲಿ ಹಾಕಿಕೊಂಡು ಹಲ್ಲೆ ಮಾಡುತ್ತಾ ಬೀದರ ನಗರ ಸುತ್ತಾಡಿಸಿದ್ದಾರೆ. ಹೀಗಾಗಿ ಪತ್ರಕರ್ತರ ಮೇಲೆ ಅಮಾನವೀಯ ದೌರ್ಜನ್ಯ ತೋರಿದ ಅರಣ್ಯ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಿ, ಪತ್ರಕರ್ತರನ್ನು ಸೂಕ್ತ ಭದ್ರ ಒದಗಿಸಬೇಕೆಂದು ಆಗ್ರಹಿಸುತ್ತೇವೆ.ರಾಜ್ಯ ಸರಕಾರ ಪತ್ರಕರ್ತರ ಹಿತರಕ್ಷಣೆ ಕಾಯ್ದೆ ಕೂಡಲೇ ಜಾರಿಗೊಳಿಸಬೇಕು.ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಿ, ಕ್ರಮ ಕೈಗೊಳ್ಳಬೇಕು.
ಪತ್ರಕರ್ತನಿಗೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಅಧಿಕಾರಿಗಳ ಮೇಲೆ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು.ದೌರ್ಜನ್ಯ ಒಳಗಾದ ಪತ್ರಕರ್ತನಿಗೆ 10 ಲಕ್ಷ ರು ಪರಿಹಾರ ನೀಡಬೇಕು.ಸಂವಿಧಾನದ ನಾಲ್ಕನೇ ಅಂಗವಾಗಿ ಸಮಾಜ ಮತ್ತು ಸರಕಾರದ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರನ್ನು ಸೂಕ್ತ ರಕ್ಷಣೆ ಒದಗಿಸಬೇಕು. ಕಾನೂನು ಬಾಹಿರವಾಗಿ ಕೆಲಸ ನಿರ್ವಹಿಸುತ್ತಿರುವ ಗುಂಪುಗಳ ವಿರುದ್ಧ ಪತ್ರಕರ್ತರು ಸುದ್ದಿ ಪ್ರಕಟಿಸುವ ಸಂದರ್ಭದಲ್ಲಿ ಕರೆ ಮತ್ತು ಜೀವ ಬೆದರಿಕೆ ಹಾಕುವ ಪ್ರಕರಣಗಳು ಕಂಡುಬಂದರೆ ಕೂಡಲೇ ಅಂತವರ ವಿರುದ್ಧ ಪೊಲೀಸರು ಬಂಧನ ರಹಿತ ವಾರೆಂಟ ಜಾರಿಗೊಳಿಸಬೇಕು. ಈ ಸಂದರ್ಭದಲ್ಲಿ ರಾಜ್ಯ ಕೋಲಿ ಸಮಾಜದ ಕಾರ್ಯದರ್ಶಿ ಲಕ್ಷ್ಮಣ ಆವಂಟಿ, ಬಾಮಸೇಫನ ರಾಜ್ಯ ಕಾರ್ಯದರ್ಶಿ ಮಾರುತಿ ಗಂಜಿಗಿರಿ, ಜೆಡಿಎಸ್ ತಾಲೂಕಾಧ್ಯಕ್ಷ ರವಿಶಂಕರ ರೆಡ್ಡಿ ಮುತ್ತಂಗಿ, ಪತ್ರಕರ್ತ ಹರ್ಷವರ್ಧನ, ಬಿಎಸ್ಪಿ ತಾಲೂಕ ಅಧ್ಯಕ್ಷ ವೈಜನಾಥ ಮಿತ್ರ, ವಿಶ್ವನಾಥ್ ಹೊಡೆ ಬೀರನಹಳ್ಳಿ,ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷರು ಸಚಿನ ಚೌಹಾಣ್,ಅಂಬರೀಶ ರಾಯಕೋಡ, ಚೇತನ ನಿರಾಳಕರ,ರಾಜಶೇಖರ ಹೊಸಮನಿ, ಸೋಮಶೇಖರ, ಇತರರು ಉಪಸ್ಥಿತರಿದ್ದರು.
ವರದಿ: ಸುನಿಲ್ ಸಲಗರ