Ad imageAd image

ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಜಗದೀಶ್ ಶೆಟ್ಟರ್ ಅವರನ್ನು ಲೋಕಸಭೆಗೆ ಕಳುಹಿಸಬೇಕು: ಅನಿಲ ಬೆನಕೆ

Bharath Vaibhav
ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಜಗದೀಶ್ ಶೆಟ್ಟರ್ ಅವರನ್ನು ಲೋಕಸಭೆಗೆ ಕಳುಹಿಸಬೇಕು: ಅನಿಲ ಬೆನಕೆ
WhatsApp Group Join Now
Telegram Group Join Now

ಬೆಳಗಾವಿ:– ದೇಶದಲ್ಲಿ ನರೇಂದ್ರ ಮೋದಿಯವರು ಮೂರನೆ ಬಾರಿ ಪ್ರಧಾ‌ನಿ ಆಗಬೇಕು. ಮೋದಿ ಆಡಳಿತದ 10 ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರ ಆಗಿಲ್ಲ. ಈ ಹಿಂದೆ ಸಾಕಷ್ಟು ಭ್ರಷ್ಟಾಚಾರಗಳು ಆಗುತ್ತಿದ್ದವು. ಹಾಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅವರನ್ನು ಲೋಕಸಭೆಗೆ ಕಳುಹಿಸಬೇಕು ಎಂದು ಮಾಜಿ ಶಾಸಕ ಅನಿಲ ಬೆನಕೆ

ಅವರು ಮನವಿ ಮಾಡಿದರು.‌

ಶುಕ್ರವಾರ ಬೆಳಗಾವಿ ಕೋರ್ಟ್ ಆವರಣದಲ್ಲಿ ಇರುವ ವಕೀಲರ ಸಂಘದ ಜೊತೆ ಆಯೋಜನೆ ಮಾಡಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಚುನಾಚಣೆಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, 40 ವರ್ಷಗಳ ರಾಜಕೀಯ ಅನುಭವ ಹೊಂದಿರುವ ರಾಜಕಾರಣಿ. ಬೆಳಗಾವಿ ಉಸ್ತುವಾರಿ ಸಚಿವರಾಗಿ ಕೂಡಾ ಕೆಲಸ ಮಾಡಿದ್ದಾರೆ.‌

ಕಳೆದ ಐದು ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ದಿ‌.‌ ಸುರೇಶ್ ಅಂಗಡಿಯವರಿಗೆ ಗೆಲ್ಲಿಸಿದ್ದೇವೆ ಜೊತೆಗೆ ಒಂದು ಬಾರಿ ಉಪಚುನಾವಣೆಯಲ್ಲಿ ಮಂಗಳಾ ಸುರೇಶ್ ಅಂಗಡಿ ಅವರನ್ನು ಗೆಲ್ಲಿಸಿದ್ದೇವೆ.‌ ದಿ. ಸುರೇಶ ಅಂಗಡಿ ಅವರಿಗೆ ಲಕ್ಷಾಂತರ ಲೀಡ್ ನಿಂದ ಗೆಲ್ಲಿಸಿದ್ದೇವೆ. ಈ ಚುನಾಣೆಯಲ್ಲಿ ಕೂಡಾ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.‌

ರಾಜ್ಯದಲ್ಲಿಯೇ ಬೆಳಗಾವಿ ಬಾರ್ ಅಸೋಸೀಯೇಸ್ ತುಂಬಾ ಶಿಸ್ತಿನ ಸಂಘ ಆಗಿದೆ.‌ ದೇಶವನ್ನು ಸ್ವಾತಂತ್ರ್ಯ ಮಾಡಲು ಹೋರಾಟ ಮಾಡಿದರು ಒಬ್ಬ ವಕೀಲ.‌ ಜನರಿಗೆ ಅನ್ಯಾಯ ಆದಾಗ ಅವರಿಗೆ ನ್ಯಾಯ ಕೊಡಿಸುವವರು ಒಬ್ಬ ವಕೀಲ. ಒಬ್ಬ ವಕೀಲರಿಗೆ 3 ಸಾವಿರ ವೋಟ್ ಹಾಕಿಸುವ ಶಕ್ತಿ ಇದೆ. ಜನರು ವಕೀಲರ ಮೇಲೆ ತುಂಬಾ ನಂಬಿಕೆ ಇಡುತ್ತಾರೆ ಹಾಗಾಗಿ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಶ್ರಮೀಸಬೇಕು ಎಂದು ಕರೆ ನೀಡಿದರು.‌

ವರದಿ:ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!