‘ತುಕ್ಕು ಹಿಡಿಯುತ್ತಿದೆ’ ಅಂಜನಾಪುರ ರಾಕ್ ಗಾರ್ಡನ್, ಪ್ರವಾಸಿಗರನ್ನು ಸೆಳೆಯಬೇಕಿದ್ದ ಪಾರ್ಕ್ ಸೊರಗಿದ್ದೇಕೆ’?
July 16, 2024
‘ತುಕ್ಕು ಹಿಡಿಯುತ್ತಿದೆ’ ಅಂಜನಾಪುರ ರಾಕ್ ಗಾರ್ಡನ್, ಪ್ರವಾಸಿಗರನ್ನು ಸೆಳೆಯಬೇಕಿದ್ದ ಪಾರ್ಕ್ ಸೊರಗಿದ್ದೇಕೆ?
SHIVAMOGGA NEWS | 16 JULY 2024
SHIKARIPURA : ಪ್ರವಾಸಿಗರ ಗಮನ ಸೆಳೆದಿದ್ದ ಶಿಕಾರಿಪುರದ ಅಂಜನಾಪುರದ ರಾಕ್ ಗಾರ್ಡನ್ (Rock Garden) ನಿರ್ವಹಣೆ ಕೊರತೆಯಿಂದ ಸೊರಗಿದೆ. ಆಟಿಕೆಗಳು ತುಕ್ಕು ಹಿಡಿಯುತ್ತಿದ್ದು, ಸ್ವಚ್ಛತೆಯು ಮರೆಯಾಗಿದೆ.
ಜಾಹೀರಾತು :-
ಯಾವುದೇ ರೀತಿಯ ಜಾಹಿರಾತಿಗಾಗಿ ಸಂಪರ್ಕಿಸಿ:
7259538444
*ಭಾರತ್ ವೈಭವ ಕನ್ನಡ ದಿನಪತ್ರಿಕೆ (New Delhi RNI Reg. no.51768)
*youtube channel
https://youtube.com/@bvnews5?si=_DHVaDnDTtobxhWt
ಶಿವಮೊಗ್ಗ :
ಜಿಲ್ಲೆಯಾದ್ಯಂತ ಮಳೆ ಬಿರುಸಾಗಿದ್ದು ಪ್ರವಾಸಿ ತಾಣಗಳಿಗೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯಕ್ಕು ಒಳ ಹರಿವು ಹೆಚ್ಚಳವಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಡ್ಯಾಂ ಪಕ್ಕದಲ್ಲಿಯೇ ರಾಕ್ ಗಾರ್ಡನ್ ಇದ್ದು ಫೋಟೊ, ಸೆಲ್ಫ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣ. ಆದರೆ ಇಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಏನಿದು ರಾಕ್ ಗಾರ್ಡನ್? ಏನೇನಿದೆ?
2018ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಕ್ ಗಾರ್ಡನ್ ಉದ್ಘಾಟಿಸಿದ್ದರು. ಇಲ್ಲಿರುವ ಸಿಮೆಂಟ್ ಕಲಾಕೃತಿಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಈಸೂರು ದಂಗೆ ಸಂದರ್ಭ ಬ್ರಿಟೀಷರು ಹೋರಾಟಗಾರರನ್ನು ಗಲ್ಲಿಗೇರಿಸಿದ್ದು, ಎತ್ತಿನ ಬಂಡಿಗಳ ಸಾಲು, ಅದರ ಮೇಲೆ ಯಡಿಯೂರಪ್ಪ ಅವರ ಕಾಲಾಕೃತಿ, ಗ್ರಾಮೀಣ ಬದುಕು, ಕೃಷಿ ಚಟುವಟಿಕೆಯ ಕಲಾಕೃತಿಗಳು ಇಲ್ಲಿ ಆಕರ್ಷಿಸುತ್ತವೆ. ಮುದ ನೀಡುವ ಗಿಡ, ಮರಗಳು ಪಾರ್ಕ್‌ನಲ್ಲಿವೆ.
ನಿರ್ವಹಣೆಯದ್ದೇ ಸಮಸ್ಯೆ
ನಿರ್ವಹಣೆ ಕೊರತೆಯಿಂದಾಗಿ ರಾಕ್ ಗಾರ್ಡನ್ ಸೊರಗಿದೆ. ಪ್ರವಾಸಿಗರು ಒಳ ಪ್ರವೇಶಿಸುತ್ತಿದ್ದಂತೆ ಗುಟ್ಕಾ, ಸಿಗರೇಟ್ ಪ್ಯಾಕುಗಳು ಕಣ್ಣಿಗೆ ರಾಚುತ್ತವೆ. ಬೆಂಚುಗಳು ಮುರಿದಿರುವುದು, ಹುಲ್ಲು ಸವರದೆ ಇರುವುದು, ಗಾರ್ಡನ್ ಒಳಗಿರುವ ಕಂಬಗಳಲ್ಲಿ ವಿದ್ಯುತ್ ದೀಪಗಳೆ ಇಲ್ಲದಿರುವುದು, ವಾಕಿಂಗ್ ಪಾತ್‌ನಲ್ಲಿರುವ ಲೈಟ್‌ಗಳ ಮರಿದಿರುವುದು, ಮಕ್ಕಳ ಆಟಿಕೆಗಳು ಮುರಿದು, ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿಯಲ್ಲಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಿನ ಯೋಜನೆ ಈಗ ತುಕ್ಕು ಹಿಡಿಯುತ್ತಿರುವುದು ವಿಪರ್ಯಾಸ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ. ಇಲ್ಲಿವೆ ಪಾರ್ಕ್ ದುಸ್ಥಿತಿಯ ಫೋಟೊಗಳು.
ವರದಿ : ಮಂಜುನಾಥ ರಜಪೂತ