Ad imageAd image

ಕಾರುಣ್ಯಶ್ರಮ ಒಂದು ಪುಣ್ಯ ಸ್ಥಳ ಅಂಕಲಿಶ್ರೀ

Bharath Vaibhav
ಕಾರುಣ್ಯಶ್ರಮ ಒಂದು ಪುಣ್ಯ ಸ್ಥಳ ಅಂಕಲಿಶ್ರೀ
WhatsApp Group Join Now
Telegram Group Join Now

ಸಿಂಧನೂರು : ಜುಲೈ 30 ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮಕ್ಕೆ ಲಿಂಗಸೂಗೂರು ತಾಲೂಕಿನ ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮಿಗಳು ಆಗಮಿಸಿ ಆಶ್ರಮದಲ್ಲಿರುವ ಎಲ್ಲಾ ಅನಾಥ ವೃದ್ಧರು ವಯಸ್ಕರ ಬುದ್ಧಿಮಾಂದ್ಯರ ಯೋಗಕ್ಷೇಮವನ್ನು ವಿಚಾರಿಸಿ ಆಶ್ರಮದ ಅನಾಥ ರಕ್ಷಕ ಡಾ. ಚನ್ನ ಬಸಯ್ಯ ಸ್ವಾಮಿ ಹಿರೇಮಠರ ನಿಸ್ವಾರ್ಥ ಸೇವೆಗೆ ಶ್ರೀಗಳು ಸಂತೋಷ ವ್ಯಕ್ತಪಡಿಸಿ ಆಶೀರ್ವದಿಸಿದರು.

ಈ ಸಮಯದಲ್ಲಿ ಆಶ್ರಮದ ವತಿಯಿಂದ ಶ್ರೀಗಳನ್ನು ಗೌರವಿಸಿ ಸನ್ಮಾನಿಸಿ ಅವರಿಂದ ಆಶೀರ್ವಾದ ಸ್ವೀಕರಿರಸಿದರು ಕಾರುಣ್ಯ ಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ನಮ್ಮ ಶ್ರೀಮಠದಿಂದ ನಿರಂತರ ಸಹಾಯ ಸಹಕಾರದ ಆಶೀರ್ವಾದ ಕಾರುಣ್ಯ ಆಶ್ರಮಕ್ಕೆ ಇರುತ್ತದೆ ಎನ್ನುವ ಮೂಲಕ ಇನ್ನೂ ಹೆಚ್ಚಿನ ಅನಾಥಪರ ಸಮಾಜಪರ ಕಾರ್ಯ ಮಾಡಲು ಕಾರುಣ್ಯ ಸಂಸ್ಥೆಗೆ ಶಕ್ತಿ ತುಂಬಿದ್ದಾರೆ.

ಈ ಸಂದರ್ಭದಲ್ಲಿ, ಆಶ್ರಮದ ಕಾರ್ಯಧ್ಯಕ್ಷ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ, ಸುಜಾತ ಹಿರೇಮಠ, ಅಕ್ಷರ ಜೋಳಿಗೆ ಶಿವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ ನಲ್ಲ, ಶರಣಯ್ಯ ಸ್ವಾಮಿ ಆದಾಪುರ, ಹನುಮೇಶ್ ಉಪ್ಪಾರ್, ಪಂಪನಗೌಡ ಅರೆಟ್ನೂರ್, ಗುರು ಸಿದ್ದಯ್ಯ ಸ್ವಾಮಿ ರಾಗಲಪರ್ವಿ ಇನ್ನು ಅನೇಕರು ಇದ್ದರು.

ವರದಿ :  ಬಸವರಾಜ ಬುಕ್ಕನಹಟ್ಟಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!