ಸಿರುಗುಪ್ಪ : ನಗರದ 16ನೇ ವಾರ್ಡಿನಲ್ಲಿರುವ ಶ್ರೀ ಉರುಕುಂದಿ ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಅವರಾತ್ರಿ ಅಮವಾಸ್ಯೆ ನಿಮಿತ್ತ ರಂಗನಾಥ ಶೆಟ್ಟಿ ಅವರ ಕುಟುಂಬದಿಂದ ಅನ್ನ ದಾಸೋಹ ನೆರವೇರಿತು.
ಅಮವಾಸ್ಯೆ ನಿಮಿತ್ತ ದೇವಸ್ಥಾನದಲ್ಲಿ ಪಂಚಾಭಿಷೇಕ, ವಿವಿಧ ಫಲಪುಷ್ಪಗಳ ಅಲಂಕಾರ, ಮಹಾಮಂಗಳಾರತಿ, ಹಾಗೂ ಪಲ್ಲಕ್ಕಿ ಸೇವೆ ಜರುಗಿದ್ದು ಹಲವಾರು ಭಕ್ತರು ಭಾಗಿಯಾಗಿ ದೇವರ ಹರಕೆ ತೀರಿಸಿದರು.

ದಾಸೋಹ ದಾನಿಗಳಾದ ರಂಗನಾಥಯ್ಯ ಶೆಟ್ಟಿ ಅವರು ಮಾತನಾಡಿ ಪ್ರತಿ ಅಮವಾಸ್ಯೆಯು ಇಲ್ಲಿ ದಾನಿಗಳ ನೆರವಿನಿಂದ ಅನ್ನದಾಸೋಹ ಜರುಗುತ್ತದೆ.
ಒಂದು ವೇಳೆ ದಾನಿಗಳು ಇಲ್ಲದಿದ್ದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ದಾಸೋಹ ನಡೆಯುತ್ತದೆ.
ಈ ಸ್ವಾಮಿಯ ಅನುಗ್ರಹದಿಂದ ನಮ್ಮ ಕುಟುಂಬಕ್ಕೆ ಒಳಿತಾಗಿರುತ್ತದೆ.
ಇಂದು ನಮ್ಮ ಕುಟುಂಬ ಸಮೇತ ಬಂದು ಪಲ್ಲಕ್ಕಿ ಸೇವೆ, ದಾಸೋಹ ಸೇವೆ ಮಾಡಿರುವುದಾಗಿ ತಿಳಿಸಿದರು.
ಅಪಾರ ಭಕ್ತವೃಂದವನ್ನು ಹೊಂದಿರುವ ಶ್ರೀ ಈರಣ್ಣ ಸ್ವಾಮಿಯ ಸೇವೆಗೈಯಲೆಂದು ನಗರದ ವಿವಿಧ ವಾರ್ಡ್ ಗಳಿಂದ ಬಂದು ತಮ್ಮ ಕೈಲಾದ ಸೇವೆಯಲ್ಲಿ ಭಾಗಿಯಾಗುತ್ತಾರೆ.
ಯಾರಾದರೂ ಮುಂದಿನ ಅಮವಾಸ್ಯೆಗೆ ದಾಸೋಹ ಮಾಡುವ ಇಚ್ಚೆಯುಳ್ಳ ಭಕ್ತರು ಮೊದಲೇ ತಿಳಿಸಿದಲ್ಲಿ ಅವರ ಸೇವೆಗೆ ಅನುವು ಮಾಡಿಕೊಡಲಾಗುವುದೆಂದು ಆರ್ಚಕ ಶರಣಯ್ಯಸ್ವಾಮಿ ತಿಳಿಸಿದರು.
ಇದೇ ವೇಳೆ ಧರ್ಮಕರ್ತರಾದ ಎಮ್.ಸೋಮಶೇಖರರೆಡ್ಡಿ, ಟ್ರಸ್ಟ್ ಅಧ್ಯಕ್ಷ ಬಿ.ಸುರೇಶರೆಡ್ಡಿ, ಸೇವಾಕರ್ತರಾದ ಬಿ.ವೀರೇಶ, ಹೆಚ್.ಶಿವಬಸವನಗೌಡ, ಎಮ್.ಮಲ್ಲಿಕಾರ್ಜುನ ಹಾಗೂ ಇನ್ನಿತರ ಭಕ್ತರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




