Ad imageAd image

ಎಲ್ಲಾ ರೈತರಿಗೂ ಬಾರದ ಬರ ಪರಿಹಾರ, ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತ..

Bharath Vaibhav
ಎಲ್ಲಾ ರೈತರಿಗೂ ಬಾರದ ಬರ ಪರಿಹಾರ, ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತ..
BARA
WhatsApp Group Join Now
Telegram Group Join Now

ಇಳಕಲ್ :ಭೀಕರ ಬರಗಾಲದಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು, ರಾಜ್ಯದ ರೈತರ ಸಂಕಷ್ಟ ನೋಡಿ ಸರ್ಕಾರ ಬರ ಪರಿಹಾರ ಘೋಷಿಸಿತು. ಅದರಂತೆ ಜನವರಿಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ರೂ.2000 ನೀಡಿತು. ಆದರೆ ಪರಿಹಾರ ಮಾತ್ರ ಎಲ್ಲಾ ರೈತರಿಗೂ ತಲುಪಿದ್ದಿಲ್ಲ, ಇನ್ನು ನಮಗೂ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು.

ಏಪ್ರಲ್ 27ರಂದು ಕೇಂದ್ರ ಸರ್ಕಾರ ರಾಜ್ಯಕ್ಕೆ 3,454 ಕೋಟಿ ರೂಪಾಯಿ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಿದ್ದು, ಅದರಂತೆ 32.12 ಲಕ್ಷ ರೈತರ ಖಾತೆಗಳಿಗೆ ಈಗಾಗಲೇ ಸಂಪೂರ್ಣ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ.

ಎರಡನೇ ಕಂತಿನಲ್ಲಾದರೂ ನಮಗೆ ಬರ ಪರಿಹಾರ ಬರಬಹುದೆಂದು ಕಾದು ಕುಳಿತಿದ್ದ ಅನ್ನದಾತನಿಗೆ ಮಾತ್ರ ಬರ ಪರಿಹಾರ ಬಂದಿಲ್ಲ, ನಮಗೆ ಯಾಕೆ ಬರ ಪರಿಹಾರ ಬಂದಿಲ್ಲ ಎಂದು ಕೃಷಿ ಇಲಾಖೆ ಅವರನ್ನು ಕೇಳಿದರೆ ಕಂದಾಯ ಇಲಾಖೆ ಅವರನ್ನು ಕೇಳಿ ಅನ್ನುತ್ತಾರೆ.

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಕೇಳಿದರೆ, ನಾವು ರೈತರ ಎಲ್ಲ ದಾಖಲೆಗಳನ್ನು ದಾಖಲಾತಿ ಮಾಡಿದ್ದೇವೆ, ಯಾಕೆ ಬಂದಿಲ್ಲವೆಂದು ಕಂದಾಯ ಇಲಾಖೆಯ ಕಚೇರಿಯ ಸಿಬ್ಬಂದಿಗಳನ್ನು ಕೇಳು ಎಂದು ಕಚೇರಿಗೆ ಕಳಿಸುತ್ತಾರೆ. ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಗಳನ್ನು ಕೇಳಿದರೆ ಪರ ಪರಿಹಾರ ಬರದೇ ಇರುವುದಕ್ಕೆ ನಿಖರವಾದ ಕಾರಣ ನಮಗೂ ಗೊತ್ತಿಲ್ಲ, ಮುಂದೆ ಬರಬಹುದೆಂಬ ಆಯ್ಕೆ ಉತ್ತರವನ್ನು ನೀಡುತ್ತಾ ಸಾಗುತ್ತಿದ್ದಾರೆ.

ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತ ಮಾತ್ರ ಪರಿಹಾರಕ್ಕಾಗಿ ಸರ್ಕಾರಿ ಇಲಾಖೆಗಳಿಗೆ ಅಡ್ಡಾಡುವ ಸ್ಥಿತಿ ಬಂದೊದಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಬರ ಪರಿಹಾರ ಬರದೇ ಇರುವುದಕ್ಕೆ ನಿಖರವಾದ ಕಾರಣವೂ ಸಹಿತ ಅಧಿಕಾರಿಗಳಿಗೆ ತಿಳಿದಿಲ್ಲ, ಇದರಿಂದಾಗಿ ರೈತರಿಗೂ ಸಮರ್ಪಕವಾದ ಉತ್ತರ ಸಿಗುತ್ತಿಲ್ಲ, ಇದಕ್ಕೆ ಸಂಬಂಧಪಟ್ಟಂತ ಕೃಷಿ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಯಾಕೆ ನಿಮಗೆ ಪರಿಹಾರ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ರೈತರಿಗೆ ತಿಳಿಸಿದರೆ, ರೈತರು ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾರೆ, ಆದರೆ ಇದು ಯಾವ ಕೆಲಸವನ್ನು ಅಧಿಕಾರಿಗಳ ವರ್ಗ ಮಾಡುತ್ತಿಲ್ಲ ಎಂಬುದು ರೈತರ ಆಕ್ರೋಶವಾಗಿದೆ.

ಅದೇನೇ ಇರಲಿ ನಮಗೆಲ್ಲ ಅನ್ನ ಉಣಿಸುವ ಅನ್ನದಾತನಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ, ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ತುರ್ತು ತಮ್ಮ ತಮ್ಮ ಇಲಾಖೆಯಲ್ಲಿ ರೈತರಿಗೆ ಪರಿಹಾರದ ಬಗ್ಗೆ ಮಾಹಿತಿ ನೀಡಿ, ಗೊಂದಲ ನಿವಾರಿಸಿ ಎಂಬುದು ನಮ್ಮ ಉದಯ ಕಾಲ ದಿನಪತ್ರಿಕೆ ಆಶಯವಾಗಿದೆ.

( ಬರ ಪರಿಹಾರ ಕೆಲವು ರೈತರಿಗೆ ಬಂದಿದೆ ,ಕೆಲವು ರೈತರಿಗೆ ಬಂದಿಲ್ಲ,ಬರ ಪರಿಹಾರ ಮಾತ್ರ ಗೊಂದಲ ಮಯವಾಗಿರುವುದಂತೂ ಸತ್ಯ, ಇದರ ಕುರಿತು ಅಧಿಕಾರಿಗಳನ್ನು ಕೆಳಿದಾಗ ಅವರು ಇನ್ನೂ ಎರಡು ಮೂರು ದಿನ ಅಥವಾ ಒಂದು ವಾರದಲ್ಲಿ ಎಲ್ಲಾ ರೈತರಿಗೂ ಪರಿಹಾರ ಬರಬಹುದು ಕಾದು ನೋಡಿ ಎಂದಿದ್ದಾರೆ.ಹಿಗಾಗಿ ಕಾಯುತ್ತಿದ್ದೇವೆ.ಎಲ್ಲ ರೈತರಿಗೂ ಬರ ಪರಿಹಾರ ಹಾಕಬೇಕು.ಬರದಿದ್ದರೆ ಹೋರಾಟ ಅನಿವಾರ್ಯ .

ಬಸನಗೌಡ ಪಾಟೀಲ್
ರೈತರು ,ಇಳಕಲ್)

(ಆದಾರ್ ನಂಬರ್ ನ್ನು ಖಾತೆಗೆ ಲಿಂಕ್ ಮಾಡಿಸದೆ ಇರುವುದು,ಬ್ಯಾಂಕ್ ನಲ್ಲಿ ಆದಾರ್ ಲಿಂಕ್ ಇಲ್ಲದಿರುವುದು,ಖಾತೆಗೂ ಆದಾರ್ ಗೆ ಹೆಸರು ಹೊಂದಾಣಿಕೆ ಇಲ್ಲದಿರುವುದು ಹೀಗೆ ಅನೇಕ ಕಾರಣಗಳಿಂದ ಕೆಲವೊಂದಿಷ್ಟು ರೈತರಿಗೆ ಬರ ಪರಿಹಾರದ ಹಣ ಜಮಾ ಆಗಿರುವುದಿಲ್ಲ,ಹಿಗಾಗಿ ನಾನು ನಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ
ಬರ ಪರಿಹಾರ ಬರದ ರೈತರ ಲಿಸ್ಟ್ ಮಾಡಿ ಸಮೀಕ್ಷೆ ನಡೆಸಿ ಎಂದು ಹೇಳಿದ್ದೇನೆ.

ಸತೀಶ್ ಕೂಡಲಗಿ
ತಹಶಿಲ್ದಾರ ಇಳಕಲ್ ತಾಲೂಕು.)

ವರದಿ :ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!