ತಮಿಳುನಾಡು : ತಮಿಳುನಾಡು ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ ಉಮಾ ಸಂಘಟನೆಯ ಮುಖ್ಯಸ್ಥ ಎಸ್.ಎ ಭಾಷಾರವರ ಅದ್ದೂರಿ ಅಂತ್ಯಕ್ರಿಯೆಯನ್ನು ಪ್ರಶ್ನಿಸಿ ಪ್ರತಿಭಟನೆಗಿಳಿದಿದ್ದ ಅಣ್ಣಾಮಲೈ ನೇತೃತ್ವದ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
1998ರಲ್ಲಿ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಉಗ್ರ ಎಸ್.ಎ.ಬಾಷಾ ಡಿಸೆಂಬರ್ 17ರಂದು ಮೃತಪಟ್ಟಿದ್ದ. ಇವನ ಅಂತ್ಯಸಂಸ್ಕಾರವನ್ನು ಅಲ್ಲಿನ ಸರ್ಕಾರ ವೈಭವೋಪೇತವಾಗಿ ನೆರವೇರಿಸಿ ಟೀಕೆಗೆ ಗುರಿಯಾಗಿತ್ತು.
ಸರ್ಕಾರದ ಈ ನಡವಳಿಕೆಯನ್ನು ಖಂಡಿಸಿ ನಿನ್ನೆ ಪ್ರತಿಭಟನೆ ಮಾಡಲು ಬಿಜೆಪಿ ಮುಂದಾಗಿತ್ತು. ಪೊಲೀಸ್ ಇಲಾಖೆ ಅನುಮತಿಸದಿದ್ದರೂ ಬಿಜೆಪಿ ಕರಾಳ ಮೆರವಣಿಗೆ ಮಾಡಲು ಮುಂದಾಗಿತ್ತು.ಆದರೆ ಪ್ರತಿಭಟನೆಗೆ ಬೀದಿಗಿಳಿದ ಅಣ್ಣಾಮಲೈ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.