ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ಬಿಜೆಪಿ ಮುಖಂಡ ಹಾಗೂ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಎಸ್.ಆರ್ ಮಂಜುನಾಥ್ ಅವರ ನೇತೃತ್ವದಲ್ಲಿ ತಮ್ಮ ಸ್ವಗೃಹದಲ್ಲಿ ಅಣ್ಣಮ್ಮ ದೇವಿಯ ಉತ್ಸವ, ಶಾಸಕ ಎಸ್ ಮುನಿರಾಜು ಅವರ ಹುಟ್ಟು ಹಬ್ಬದ ಆಚರಣೆ ಮತ್ತು ಮಂಜುನಾಥ್ ಅವರು ನೂತನ ಗ್ರಹ ಕಚೇರಿ ಉದ್ಘಾಟನೆ ಹಮ್ಮಿಕೊಳ್ಳಲಾಗಿತ್ತು.
ಮಂಜುನಾಥ್ ಅವರ ಕುಟುಂಬದ ಸದಸ್ಯರು ಬಿಜೆಪಿ ಮುಖಂಡರು ಸೇರಿದಂತೆ ಶಾಸಕ ಎಸ್ ಮುನಿರಾಜು ಅವರ ಹುಟ್ಟು ಹಬ್ಬದ ನಿಮಿತ್ತ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಶಾಸಕ ಎಸ್ ಮುನಿರಾಜು ಭಾರತೀಯರ ಪ್ರಮುಖ ದೇವಾನು ದೇವತೆಗಳಲ್ಲಿ ಒಂದಾದ ದೇವತೆ ಅಣ್ಣಮ್ಮ ದೇವಿ, ಅಣ್ಣಮ್ಮ ದೇವಿಯ ಭಕ್ತರು ಅಣ್ಣಮ್ಮದೇವಿಯನ್ನು ವೇದಘೋಷಗಳಿಂದ ಕರೆತಂದು ಪ್ರತಿಷ್ಠಾಪಿಸಿ ಅಲಂಕಾರಿಕ ಪೂಜೆ ಪುನಸ್ಕಾರ ಮಹಾಮಂಗಳಾರತಿ ವಿವಿಧ ರೂಪದಲ್ಲಿ ನೈವೇದ್ಯ ನೆರೆವೆರಿಸುವವರು. ಅದೇ ರೀತಿ ನಮ್ಮ ಮಂಜುನಾಥ್ ಅಣ್ಣಮ್ಮ ದೇವಿ ಕರೆತಂದು ಶಾಸ್ತ್ರೋಕ್ತವಾಗಿ ಪೂಜಾ ಪುನಸ್ಕಾರ ಮಾಡಿ ಜೊತೆಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ ಅವರಿಗೆ ದೇವಿ ಸಕಲ ಸಂಪತ್ತು ಐಶ್ವರ್ಯ ಆರೋಗ್ಯ ಆಯುಷ್ಯ ಕರುಣಿಸಲಿ ಇದೆ ವೇಳೆ ಪೌರ ಕಾರ್ಮಿಕರಿಗೆ ಉಡುಗೊರೆ ಮತ್ತು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.ಶಾಸಕ ಎಸ್ ಮುನಿರಾಜು ಅವರ ಧರ್ಮಪತ್ನಿ ಹಾಗೂ ಬಿಜೆಪಿ ಹಿರಿಯ ನಾಯಕಿ ಶ್ರೀಮತಿ ಸುಜಾತ ಮುನಿರಾಜು ಮಾತನಾಡಿದರು.
ಎಸ್ ಆರ್ ಮಂಜುನಾಥ್ ಸರ್ವರಿಗೂ ಸ್ವಾಗತಿಸಿದರು. ಶೆಟ್ಟಿಹಳ್ಳಿ ವಾರ್ಡಿನ ಬಿಜೆಪಿ ಅಧ್ಯಕ್ಷ ಬಿ.ಸುರೇಶ್ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಆರಾಧ್ಯ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್