ಬೆಳಗಾವಿ : ಹೆಚ್ಚು ಕುಡಿತದ ಚಟಕ್ಕೆ ಬಿದ್ದಿದ್ದ ತಮ್ಮನನ್ನು ಅಣ್ಣ ಪ್ರಶ್ನಿಸಿದ್ದಾನೆ. ಇದೇ ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದು ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣ ಮಾರಕಾಸ್ತ್ರದಿಂದ ತಮ್ಮನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಎಸ್ ಧಾಗೇರಾ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ.
ಮಾರಕಾಸ್ತ್ರದಿಂದ ಕೊಚ್ಚಿ ಲಕ್ಷ್ಮಣ ಬರಮ ಬಾಳೆಕುಂದ್ರಿ (28) ಭೀಕರ ಕೊಲೆಯಾಗಿದೆ. ಕೊಲೆ ಮಾಡಿದ ಅಣ್ಣ ಮಾರುತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಷ್ಟಪಟ್ಟು ದುಡಿದು ಅಣ್ಣತಮ್ಮಂದಿರು ಹೊಸದಾಗಿ ಮನೆ ಕಟ್ಟಿದ್ದರು. ತಂದೆ ಇಲ್ಲದೆ ಇಬ್ಬರು ಸಹೋದರರು ತಾಯಿಯ ಆರೈಕೆಯಲ್ಲಿ ಬೆಳೆದಿದ್ದರು.
ಮನೆ ಕಟ್ಟಿ ಮದುವೆ ಮಾಡಿಕೊಡುವ ಪ್ಲಾನ್ ನಲ್ಲಿ ಇದ್ದರು. ತಮ್ಮ ಲಕ್ಷ್ಮಣ್ ಹೆಚ್ಚು ಕುಡಿಯುತ್ತಿದ್ದದ್ದನ್ನು ಅಣ್ಣ ಮಾರುತಿ ಪ್ರಶ್ನಿಸಿದ್ದಾನೆ. ಇಬ್ಬರ ನಡುವೆ ಇದೆ ವಿಚಾರಕ್ಕೆ ಗಲಾಟೆ ಆಗಿ ಸಹೋದರ ಮಾರುತಿ ತಮ್ಮನನ್ನೇ ಕೊಲೆ ಮಾಡಿದ್ದಾನೆ. ಎರಡು ದಿನದ ಹಿಂದೆ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.