ನಿಪ್ಪಾಣಿ : ಬೇಡಕಿಹಾಳದಲ್ಲಿ ಡಿಸೆಂಬರ್ 10ರಂದು ದಿವಾನ್ ಬಹದ್ದೂರ್ ಅನ್ನಾಸಾಹೇಬ ಲಟ್ಟೆ ಹಾಗೂ ಭೂದಾನಿ ರತ್ನಪ್ಪಾ ಶೆಟ್ಟಿ ಅವರ ಅರ್ಧಕೃತಿ ಪುತ್ಥಳಿ ಅನಾವರಣ . ತಾಲೂಕಿನ ಬೇಡಕಿಹಾಳ ಗ್ರಾಮದ ಬಿಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಡಿಸೆಂಬರ್ 10ರಂದು ಮುಂಬೈ ಪ್ರಾಂತ್ಯದ ಮೊದಲ ಅರ್ಥ ಸಚಿವ ದಿವಾನ್ ಬಹದ್ದೂರ್ ಅಣ್ಣಾ ಸಾಹೇಬ್ ಲಟ್ಟೆ ಹಾಗೂ ಗ್ರಾಮದ ಭೂದಾನಿಗಳಾದ ದಿವಂಗತ ರತ್ನಪ್ಪ ಶೆಟ್ಟಿ ಅವರ ಅರ್ಧ ಕೃತಿ ಪುತ್ತಳಿ ಅನಾವರಣ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಸಮಾರಂಭ ನಡೆಯಲಿದೆ. ಎಂದು ಸಾಂಗಲಿ ಲಟ್ಟೆ ಶಿಕ್ಷಣ ಸಂಸ್ಥೆಯ ನಿರ್ದೇಶಕ ಇಂದ್ರಜಿತ್ ಪಾಟೀಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈ ಕುರಿತು ಅಧಿಕ ಮಾಹಿತಿ ನೀಡಿದ ಅವರು *ಅಮೆರಿಕ ಹಾಗೂ ಬೆಳಗಾವಿಯಲ್ಲಿಯ ದಿವಾನ್ ಬಹದ್ದೂರ್ ಅಣ್ಣಾ ಸಾಹೇಬ ಲಟ್ಟೆ ಫೌಂಡೇಶನ್ ಅಧ್ಯಕ್ಷ ಡಾ. ಭರತ ಲಟ್ಟೆ ಅವರ ಹಸ್ತದಿಂದ ದಿವಾನ ಬಹದ್ದೂರ್ ಅನ್ನಾಸಾಹೇಬ.ಲಟ್ಟೆ ಯವರ ಪುತ್ತಳಿಯ ಅನಾವರಣ ನಡೆಯಲಿದ್ದು, ಸಾಂಗಲಿ ಪಟ್ಟಣದ ಲಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೀವ ಪಾಟೀಲರ ಹಸ್ತದಿಂದ ಭೂದಾನಿಗಳಾದ ರತ್ನಪ್ಪ ಶೆಟ್ಟಿಯವರ ಅರ್ಧಕೃತಿ ಪುತ್ಥಳಿ ಅನಾವರಣ ನಡೆಯಲಿದೆ. ಕಾರ್ಯದರ್ಶಿ ಸುಹಾಸ ಪಾಟೀಲರ ಹಸ್ತದಿಂದ ನೂತನ ಕೊಠಡಿಗಳ ಉದ್ಘಾಟನೆ ನಡೆಯಲಿದ್ದು ನಿರ್ದೇಶಕರಾದ ಪಿ ಆರ್ ಪಾಟೀಲ್ ಅವರ ಹಸ್ತದಿಂದ ದೀಪ ಪ್ರಜ್ವಲನೆ ಆಗಲಿದೆ.
ಈ ಎಲ್ಲ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ ಶಾಂತಿನಾಥ ಕಾಂತೆ ವಹಿಸಲಿದ್ದು ಲಟ್ಟೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ ಸಂಸ್ಥೆಯ ಖಜಾಂಚಿಯಾದ ಬಾಲಚಂದ್ರ ಪಾಟೀಲ ಡಾ. ಪ್ರಮೋದ್ ಚೌಗಲೆ ಮಾಜಿ ಸಂಚಾಲಕರಾದ ಸುಧೀರ್ ರತ್ನಪ್ಪ ಶೆಟ್ಟಿ ಹಾಗೂ ಪಿಕೆಪಿಎಸ್ ಅಧ್ಯಕ್ಷ ಪಾಸಗೌಡ ಪಾಟೀಲ್ ಅವರ ಮುಖ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಪುತ್ತಳಿ ಅನಾವರಣ ಹಾಗೂ ನೂತನ ಕೊಠಡಿಗಳ ಉದ್ಘಾಟನೆ ಸಮಾರಂಭಕ್ಕೆ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ತಾತ್ಯಾಸಾಹೇಬ ಖೋತ ಸೇರಿ ಆಡಳಿತ ಮಂಡಳಿಯ ಉಪಾಧ್ಯಕ್ಷರು ಸದಸ್ಯರು ಪ್ರಾಂಶುಪಾಲರು ಬೋಧಕರು ಹಾಗೂ ಶಮನೇವಾಡಿ ಬೇಡಕಿಹಾಳ ಗ್ರಾಮದ ಗಣ್ಯರು ಉಪಸ್ಥಿತರಾಗಲಿದ್ದಾರೆಂದು ತಿಳಿಸಿದರು .
ಈ ಸಂದರ್ಭದಲ್ಲಿ ನಾಭಿರಾಜ್ ಖೋತ ಜಯಕುಮಾರ್ ಖೋತ ಪ್ರಶಾಂತ ಪಾಟೀಲ, ತಾತ್ಯಾಸಾಹೇಬ ಚೌಗುಲೆ ಅಭಯ ಖೋತ ಅಪ್ಪಾ ಸಾಹೇಬ ಬೇಡಗೆ, ಸಿ.ಎಂ. ಪಾಟೀಲ, ಪ್ರಾಚಾರ್ಯ ಎಂ ಎಸ್ ಕಟ್ಟಿ ಉಪ ಪ್ರಾಚಾರ್ಯ ಜಿ.ಎ.ಕಾಂಬಳೆ ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




