Ad imageAd image

“ಜ್ಞಾನಸಾಗರ” ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

Bharath Vaibhav
“ಜ್ಞಾನಸಾಗರ” ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ
WhatsApp Group Join Now
Telegram Group Join Now

ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಸಂಸ್ಥೆಯಿಂದ ಆನಿಗೋಳ ವಲಯದ ಆನಿಗೋಳ ಕಾರ್ಯಕ್ಷೇತ್ರದಲ್ಲಿ “ಜ್ಞಾನಸಾಗರ” ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನ ಮಾರುತಿ ದಳವಾಯಿ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟಕರಾಗಿ ಧಾರವಾಡ ಪ್ರಾದೇಶಿಕ ಕಚೇರಿ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಸುಧಾ ಮೇಡಂ ಅವರು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶೈಲಾ ಅವರು ತಾಲೂಕಿನಲ್ಲಿ ನಡೆಯುವ 25 ಜ್ಞಾನವಿಕಾಸ ಕೇಂದ್ರಗಳ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮತ್ತು ಮಾಹಿತಿ ನೀಡುತ್ತಾ ಸದಸ್ಯರಲ್ಲಿ ಕ್ರಿಯಾಶೀಲತೆಗೆ ಪ್ರಾಮುಖ್ಯತೆ ನೀಡಿ ತಿಂಗಳ ಮಾಹಿತಿ ಕಾರ್ಯಕ್ರಮಗಳಲ್ಲಿ ಆಟೋಟ, ಸ್ಪರ್ಧೆಗಳು,ಜಾನಪದ ಗೀತೆ ಏಕಾಭಿನಯ ಪಾತ್ರ ಹೀಗೆ ಮಾಡುವ ಮೂಲಕ ಈ ಜ್ಞಾನ ವಿಕಾಸ ಕಾರ್ಯಕ್ರಮ ಅತ್ಯುತ್ತಮವಾಗಿ ನಿರ್ವಹಣೆ ಮಾಡಿರುತ್ತಾರೆ ಎಂದು ತಿಳಿಸಿದರು.
ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿಗಳು ಹೇಮಾವತಿ ಅಮ್ಮನವರ ಕನಸಿನ ಮಹಿಳೆಯರ ಜ್ಞಾನ ವಿಕಾಸ ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರದಿಂದ ನಡೆಯುವಂತಹ ಜ್ಞಾನ ವಿಕಾಸ ಕಾರ್ಯಕ್ರಮದ ಹಿನ್ನೆಲೆ ಮತ್ತು ಮಹಿಳೆಯರಲ್ಲಿ ಸಾವಲಂಬನೆ ಬದುಕು ಕಟ್ಟಿಕೊಳ್ಳಲು ಉದ್ಯೋಗ ಮೂಲಕ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿಗೆ ಬೆಳೆಸುವಲ್ಲಿ ಪ್ರತಿಯೊಬ್ಬ ತಾಯಂದಿರ ಕರ್ತವ್ಯ ಇದೆ.ವಾತ್ಸಲ್ಯಮನೆ,ಮಾಶಾಸನ,ಜನಮಂಗಳ ಕಾರ್ಯಕ್ರಮಗಳ ಮುಖಾಂತರ ಸಮಾಜದ ಅಸಹಾಯಕರಿಗೆ ಸಹಾಯಗಳನ್ನು ನೀಡುವ ಮೂಲಕ ಪೂಜ್ಯ ಖಾವಂದರು ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಸಹಾಯ ಮಾಡುತ್ತಾ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ,ಲಕ್ಷ್ಮಿ ಪೂಜೆಯನ್ನು ಮಾಡಿ ಎಲ್ಲರಿಗೆ ಉಡಿ ತುಂಬಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಸುನಿತಾ ಶಿವಾನಂದ್ ಸಣ್ಣಮನಿ ನಿರೂಪಣೆಯನ್ನು,ಸ್ವಾಗತ ಮಂಜುಳಾ ಸೋಮಪ್ಪ ನರಗುಂದ ಸ್ವಾಗತವನ್ನು, ಸೇವಾಪ್ರತಿನಿಧಿ ಗಿರಿಜಾ ಮಂಜುನಾಥ್ ಧೂಳಪ್ನವರ ಧನ್ಯವಾದ ಮಾಡಿದರು.ಈ ಸಂದರ್ಭ ಜಯಶ್ರೀ ಆರತಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.

ವರದಿ: ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!