Ad imageAd image

ಪಿ. ಎಂ. ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

Bharath Vaibhav
ಪಿ. ಎಂ. ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
WhatsApp Group Join Now
Telegram Group Join Now

ಚಿಕ್ಕೋಡಿ : ಇಂದಿರಾನಗರ ಪಿ. ಎಂ. ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.

ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿ ಪಟ್ಟಣದ ಇಂದಿರಾ ನಗರ ದಲ್ಲಿರುವ ಪಿ.ಎಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಅತಿ ಅದ್ದೂರಿಯಾಗಿ ಜರುಗಿತು.

ಈ ಕಾರ್ಯಕ್ರಮ ಪ್ರತಿ ವರ್ಷ ತಪ್ಪದೇ ದರವಾಗಿ ಜರುಗುತ್ತದೆ ಈ ವರ್ಷವೂ ಕೂಡ ಸ್ವಾಗತ ಗೀತೆ ಪ್ರಾರಂಭಿಸಿ ವಿದ್ಯಾರ್ಥಿಗಳ ಪೋಷಕರು ಉಪನ್ಯಾಸಕರು ಉಪನ್ಯಾಸಕಿಯರು ಸೇರಿದಂತೆ ನಗರದ ನಾಗರಿಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಿತು.

ಈ ಕಾರ್ಯಕ್ರಮದಲ್ಲಿ ಸರಸ್ವತಿ ಫೋಟೋ ಪೂಜೆ ಮಾಡಿ ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು.

ತದನಂತರ ಸ್ಟೇಜ್ ಮೇಲೆ ಉಪಸ್ಥಿತರಿರುವ ಅತಿಥಿಗಳಿಗೆ ಹೂವು ಕುಚ್ಚು ನೀಡಿ ಸತ್ಕಾರಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಯುತ ಜಿಲ್ಲಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಚಿಕ್ಕೋಡಿ, ಎಂ ಟಿ ಜನಗೌಡರ, ಶ್ರೀ ಯುತ ನಿವೃತ ಮುಖ್ಯ ಉಪಾಧ್ಯಾಯಕರು ಎಸ್ ಆರ್ ಡೊಂಗರೆ, ಶ್ರೀಯುತ ಡಯಟ್ ಉಪನ್ಯಾಸಕರು ಚಿಕ್ಕೋಡಿ ಎಸ್. ಎ. ದೇವರುಷಿ, ಶ್ರೀ ಯುತ ಶಶಾಂತ ಕಾಂಬಳೆ ಎಸ್ ಡಿ ಎಂ ಸಿ ಅಧ್ಯಕ್ಷರು ಚಿಕ್ಕೋಡಿ, ಇವರುಗಳು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಾವುದಾದರು ಪ್ರಾಥಮಿಕ ಶಾಲೆ ಇದ್ದರೆ ಅದು ಇಂದಿರಾನಗರ ಶಾಲೆ ಮಾತ್ರ ಏಕೆಂದರೆ ಪ್ರತಿವರ್ಷ ವಾರ್ಷಿಕ ಸ್ನೇಹ ಸಮ್ಮೇಳನ ಚಿರುಪಿಲಿ ಕಲರವ ಕಾರ್ಯಕ್ರಮ ಹರ್ಷದಿಂದ ಎಲ್ಲ ವಿದ್ಯಾರ್ಥಿಗಳ ಪೋಷಕರಿಗೆ ಅದ್ಭುತವಾದ ಮನೋರಂಜನದೋoದಿಗೆ ಬಹುಮಾನಗಳನ್ನು ವಿತರಿಸಿ, ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ ಎಂದರು

ನಂತರ ಜನಗೌಡರು ಮಾತನಾಡಿ ಸಾಬಿರ ಜಮಾದಾರ ಇವರು ಸುಮಾರು ವರ್ಷಗಳಿಂದ ಪುರಸಭೆ ಸದಸ್ಯರಾಗಿ ಸತತವಾಗಿ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಇಂತಹ ಲೀಡರ್ ಸಿಗಲು ಈ ನಗರದ ಜನ ಬಹಳ ಸಂತೋಷ ವ್ಯಕ್ತಪಡಿಸುತ್ತಾರೆ ಎಂದರು ನಂತರ ಸಾಬೀರ್ ಜಮಾದಾರ್ ಇವರು ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ಸಹಾಯ ಧನ ನೀಡಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಾಬೀರ್ ಜಮಾದಾರ್ ಪುರಸಭೆ ಸದಸ್ಯರು ಚಿಕ್ಕೋಡಿ.
ಅವರ ತಾಯಿಯಾದ ಶ್ರೀಮತಿ ನೂರಜಾ ಜಮಾದಾರ್, ಈ ಶಾಲೆಯ ಮುಖ್ಯ ಉಪಾಧ್ಯಾಯಕರಾದ ಡಿಆರ್ ಚಲವಾದಿ, ಶ್ರೀಯುತ ಭಿರಡಿ ಸರ್ ಶಿಕ್ಷಣ ಸಂಯೋಜಕರು, ಶ್ರೀಯುತ ಎಸ್ಎ ಖಡ್ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರು, ತಾಲೂಕ ಕ್ಷೇತ್ರ ಸಮೂಹ ಸಂಪನ್ಮೂಲ ಶ್ರೀಮತಿ ಶಿಲ್ಪ ಹೆಚ್ಎನ್, ಶ್ರೀ ರಜಪೂತ, ಇನ್ನು ಇತರ ಎಲ್ಲ ಪೋಷಕರು ವಿದ್ಯಾರ್ಥಿಗಳು ನಗರದ ಎಲ್ಲ ಬಂಧುಬಾಂಧವರು ಈ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!