Ad imageAd image

ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳಿಂದ ವಾರ್ಷಿಕ ಸ್ನೇಹ ಸಮ್ಮೇಳನ

Bharath Vaibhav
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳಿಂದ ವಾರ್ಷಿಕ ಸ್ನೇಹ ಸಮ್ಮೇಳನ
WhatsApp Group Join Now
Telegram Group Join Now

ಕಾರದಗಾ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳಿಂದ ವಾರ್ಷಿಕ ಸ್ನೇಹ ಸಮ್ಮೇಳನ .ಕಣ್ಮನ ಸೆಳೆಯುವ ನೃತ್ಯ.

ನಿಪ್ಪಾಣಿ:ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವಎನ್ನುವಂತೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಪ್ರಾಥಮಿಕ ಕನ್ನಡ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ೨೦೨೫ ರ ಕಾರ್ಯಕ್ರಮ ಅತ್ಯಂತ ನೋಡುಗರ ,ಪಾಲಕರ ಕಣ್ಮನ ಸೆಳೆಯಿತು.

ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಿಶೇಷವಾಗಿ ಶಾಲೆಯ ಇತಿಹಾಸ ತೋರಿಸುವ ಕಿರು ಚಲನಚಿತ್ರದ ಮೂಲಕ ನೋಡುಗರ ಗಮನ ಸೆಳೆಯುವಂತೆ ಮಾಡಿದರು. ಮಕ್ಕಳಲ್ಲಿ ಅಡಗಿರುವ ಸೂಪ್ತ ಕಲೆಗಳನ್ನು ತೋರ್ಪಡಿಸಲು ವಿಶೇಷವಾಗಿ ದೀಪ ಹಣೆಯ ಮೇಲಿಟ್ಟು ಯೋಗಾ ನೃತ್ಯ, ಬಬ್ರುವಾಹನ ಏಕಪಾತ್ರಾಭಿನಯ, ಚಿತ್ರಕಲೆ, ತರ್ಲೆ ವಾರ್ತೆಗಳು,ಮೈಮ, ಅಂಕಿಗಳ ಮಹಾರಾಜ ಯಾರು? ನಾಟಕ. ಡೊಳ್ಳಿನ ಪದ, ಅತ್ತಿ ಅತ್ತಿ ಸೋದರತ್ತೆ ನೃತ್ಯ. ರಾಮ ಲಕ್ಷ್ಮಣ ಸೀತೆ ಮತ್ತು ಹನುಮನ ವೇಷ ಧರಿಸಿ ನೃತ್ಯ, ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ವೀರ ಮಹಿಳೆಯರ ವೇಷ ಧರಿಸಿದ ಬಾಲಕಿಯರು.. ಅನೇಕ ಚಲನಚಿತ್ರ ನೃತ್ಯ ಮಾಡಿ ಗಮನ ಸೆಳೆದರು.ಸಾವಿರಾರು ಜನ ಭಾಗಿಯಾಗಿ ಕಾರ್ಯಕ್ರಮದ ಮಧುರ ಮನರಂಜನೆಯ ಕ್ಷಣಗಳನ್ನು ಸವಿದರು.

ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಪದ್ಮಾವತಿ ಅಲಂಕಾರ. ಉಪಾಧ್ಯಕ್ಷರು ಶ್ರೀ ಕಿರಣ್ ಕುಮಾರ್ ಟಾಕಳೆ, ಉದ್ಘಾಟಕರಾಗಿ ಬಂದ ಶ್ರೀ ರತನ ಮೋಹನ ಮೆಳವಂಕೆ. ಕನ್ನಡ ಬಳಗದ ಗೌರವಾಧ್ಯಕ್ಷರು ಶ್ರೀ ರಾಜು ಖಿಚಡೆ ಶ್ರೀ ದೇವಪ್ಪಾ ದೇವಕತೆ ಪಂಚಾಯತ ಸದಸ್ಯರು.. ಹಾಗೂ ಗ್ರಾಮ ಪಂಚಾಯತ ಎಲ್ಲಾ ಸದಸ್ಯರು. ಹಾಗೂ ಕನ್ನಡ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ರಾಜು ಗಾವಡೆ ಉಪಾಧ್ಯಕ್ಷರು ಶ್ರೀ ಅಜೀತ ಪಡವಾಳೆ ಸದಸ್ಯರು ಶ್ರೀ ಬಾಳಾಸಾಹೇಬ ನವನಾಳೆ ಶ್ರೀ ಸಂಜಯ ಬುಡಕೆ ಸಿಆರ್ ಸಿ. ಸಂಜಯ ಲಮಾನೆ. ರಾವಸಾಹೇಬ್ ಪಡವಾಳೆ,ಸುರೇಶ್ ಖೋತ,ಲಗಮವ್ವ ಕಟ್ಟಿಕರ, ಕಲಗೌಡ ಖೋತ, ಶ್ರೀ ಬಾಬಾಸಾಹೇಬ ಮುರಕುಂಡೆ ಶ್ರೀ ಗಜಾನನ ಸಾಳುಂಕೆ ಶ್ರೀ ಜಾಧವ್ ಸರ್ ಶ್ರೀ ಮಡ್ಡೆ ಸರ್ ಶ್ರೀಮತಿ ಜಮದುರೆ ಮೇಡಂ, ಎಲ್ಲಾ ದಾನಿಗಳು, ಎಲ್ಲಾ ಪಾಲಕರು, ಮುದ್ದು ಮಕ್ಕಳು ಶಾಲೆಯ, ಮುಖ್ಯೋಪಾಧ್ಯಾಯರು ಶ್ರೀ ಬಾಹುಬಲಿ ನರವಾಡೆ ಶಿಕ್ಷಕರು ಊರಿನ ಹಿರಿಯರು ಗ್ರಾಮಸ್ಥರು ಸೇರಿ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದರು.

ಈ ಸಂಧರ್ಭದಲ್ಲಿ ರಾಜು ಖಿಚಡೆಯವರು ಮಾತನಾಡಿ *ಶಾಲೆಗೆ ಅನೇಕ ರೀತಿಯ ತೊಂದರೆಗಳು ಇದ್ದರೂ ಕೂಡಾ ತುಂಬಾ ಸಹಕಾರ ಪ್ರೋತ್ಸಾಹ ಬೆಂಬಲ ನೀಡಿದ್ದೇನೆ. ಈಗ ಆಟದ ಮೈದಾನ ಜಾಗದ ಸಮಸ್ಯೆ ಬಗೆಹರಿಸಿದ್ದೇನೆ. ಇನ್ನು ಮುಂದೆ ಶಾಲೆಯ ಭೌತಿಕ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ. ಹಾಗೂ ಶಾಲೆಗೆ ಅವಶ್ಯಕವಿರುವ ಸ್ಮಾರ್ಟ್ ಕ್ಲಾಸ್ ಟಿ.ವಿ ನೀಡುತ್ತೇನೆ. ಎಂದು ಘೋಷಿಸಿದರು.ನಿರೂಪಣೆ ಶ್ರೀಮತಿ ಸುನಯನಾ ಪಾಟೀಲ ಮೇಡಂ ಶ್ರೀ ಬಾಹುಬಲಿ ನರವಾಡೆ ಇವರು ಸ್ವಾಗತಿಸಿದರು. ಶ್ರೀ ಎಸ್.ಎಸ್. ಮಾಳಗೆ ಶಿಕ್ಷಕರು ವಂದಿಸಿದರು ವಾರ್ಷಿಕ ಸ್ನೇಹ ಸಮ್ಮೇಳನಕ್ಕೇ ಪಾಲಕರು ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವರದಿ :ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
Share This Article
error: Content is protected !!