ಕಂದಗಲ್ಲ : ಪುರಾಣ ಪ್ರವಚನ ಪುಣ್ಯಕಥೆಗಳು ಮನುಷ್ಯನ ಜೀವನಕ್ಕೆ ದಾರಿದೀಪಗಳಾದರೆ ಶಾಲೆಯಲ್ಲಿ ನೆಡೆಯುವ ಶೈಕ್ಷಣಿಕ, ಸಾoಸ್ಕೃತಿಕ, ಕ್ರೀಡೆಗಳು, ಶಿಕ್ಷಣ, ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ದಾರಿದೀಪಗಳು ಎಂದು ಸಜ್ಜಲಶ್ರೀ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 33 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪಂಪಣ್ಣ ಸಜ್ಜನ ಮಾತನಾಡಿದರು.
ಸುಕ್ಷೇತ್ರ ಸಜ್ಜಲಗುಡ್ಡ -ಕಂಬಳಿಹಾಳದ ಪರಮಪೂಜ್ಯಶ್ರೀ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಮು ಅತಿಥಿಗಳಾಗಿ ಸದಾಶಿವ ಗುಡಗುಂಟಿ ಕ್ಷೇತ್ರ ಸಮನ್ವಯಧಿಕಾರಿಗಳು, ವಿನೋದ ಭೋವಿ ಬಿ ಆರ್ ಪಿ ಹುನಗುಂದ,ಎ ಎಚ್ ಗೌಡರ ,ಶಿಕ್ಷಣ ಸಂಯೋಜಕರು ಕರಡಿ ವಲಯ, ವಿನಾಯಕ ಸಬರದ, ಸಿ ಆರ್ ಪಿ ಕಂದಗಲ್ಲ,ಶಾಂತಕುಮಾರ ಕುಟಗಮರಿ ಸಿ ಆರ್ ಪಿ ನಂದವಾಡಗಿ ಡಿ ಎಸ್ ಹುಜರತಿ ಕಾರ್ಯದರ್ಶಿಗಳು, ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ಮಹಾಂತೇಶ ಕಡಿವಾಲ ಬಸೆಟ್ಟೆಪ್ಪ ಸಜ್ಜನ, ಶೇಖಯ್ಯ್ ಗುರುವಿನಮಠ,ಡಿ ಎಸ್ ಸಿಂಪಿ,ಎಂ ಎಸ್ ಕಡಿವಾಲ,ಎಸ್ ಟಿ ತೋಟದಸ್ವಾಮೀಮಠ, ವೀರೇಶ ಚ ಶಿಂಪಿ,, ಕೆ ಎಚ್ ಕರಡಿ,, ಎಸ್ ಬಿ ಕಾಳಿಪ್ರಸಾದ, ಶೇಖರಪ್ಪ ಕಡಿವಾಲ, ಬೋರಮ್ಮ ಕರಕಂಠಿ, ಅಥಿತಿಗಳಾಗಿ ಆಗಮಿಸಿದ್ದರು.
ವಾರ್ಷಿಕ ಸ್ನೇಹ ಸಮ್ಮೇಳನ, ವಿದ್ಯಾರ್ಥಿಗಳ ಬೀಳ್ಕೊಡುಗೆ




