Ad imageAd image

ಅಲ್ಲಮ ಪ್ರಭು ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ 2024/2025 ರ ವಾರ್ಷಿಕ ಮಹಾಸಭೆ

Bharath Vaibhav
ಅಲ್ಲಮ ಪ್ರಭು ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ 2024/2025 ರ ವಾರ್ಷಿಕ ಮಹಾಸಭೆ
WhatsApp Group Join Now
Telegram Group Join Now

ರಾಯಚೂರು:- ನಗರದ ಅಲ್ಲಮ ಪ್ರಭು ಕೊಲೋಣಿಯ ವಾರ್ಷಿಕ ಮಹಾ ಸಭೆಯಲ್ಲಿ

1) 22 23ನೇ ಸಾಲಿನ ಜರುಗಿದ ಮಹಾಸಭೆಯ ನಡುವಳಿಕೆಗಳನ್ನು ಓದಿ ದೃಡೀಕರಿಸುವುದು.2) 2023/2024 ಸಾಲಿನ ವಾರ್ಷಿಕ ವರದಿಗೆ ಒಪ್ಪಿಗೆ ಕೊಡುವುದು.3) ಶಾಸನಬದ್ಧ ಲೆಕ್ಕ ಪರಿಶೋಧನೆ ಯಾದ ಜಮ ಖರ್ಚು ಲಾಭ ಹಾನಿ ಹಾಗೂ ಅಡಾವ್ ಪತ್ರಿಕೆಗಳಿಗೆ ಅನುಮೋದನೆ ನೀಡುವುದು.4) 2024/2025ನೇ ಸಾಲಿನಲ್ಲಿ ಮಾಡಬಹುದಾದ ಖರ್ಚಿನ ಹಾಗೂ ಆದಾಯದ ವಿವರಗಳಿಗೆ ಮಂಜೂರಿ ಕೊಡುವುದು.5) 2024 /2025 ನೇ ಸಾಲಿನ ಲೆಕ್ಕ ಪರಿಶೋಧನೆಗಾಗಿ ಲೆಕ್ಕ ಪರಿಶೋಧಕರನ್ನು ನೇಮಕಾತಿ ಮಾಡಲು ಒಪ್ಪಿಗೆ ಕೊಡುವುದು.6) ಅಧ್ಯಕ್ಷರ ಅಪ್ಪಣೆ ಮೇರೆಗೆ ಬರತಕ್ಕ ಇತರೆ ಯಾವುದೇ ವಿಷಯಗಳು

ಇಲ್ಲಿನ ಅಲ್ಲಮಪ್ರಭು ಕಾಲೋನಿಯ ಎಲ್ಲಾ ನಿವೇಶನಗಳನ್ನು ಸಂಘದಿಂದ ಸದಸ್ಯರಿಗೆ ನೀಡಲಾಗಿದೆ ಸುಮಾರು 1140 ಸದಸ್ಯರಿದ್ದು ಸಂಘಕ್ಕೆ ಹೆಚ್ಚಿನ ಸದಸ್ಯತ್ವ ಹಣ ಪಾವತಿಸಿದೆ ಸುಮಾರು 800 ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ.ಸಹ ಕಾರಿ ಸಂಘದ ವ್ಯಾಪ್ತಿಯಲ್ಲಿ ಬರುವ 12 ಸಂಖ್ಯೆ ನಿವೆಷನಗಳನ್ನು ಕಳೆದ 40ವರ್ಷದಿಂದ ಲೀಜ್ ಗೆ ಕೊಡದೆ ಇರುವುದನ್ನು ಗಮನಿಸಿ ಸಂಘದಿಂದ 6 ನಿವೇಶನಗಳಿಗೆ ಲೀಜ್ ಮೇಲೆ ಪಡೆಯಲು ಪ್ರಕಟಣೆ ಹೊರಡಿಸಿದೆ.

ಈಗಾಗಲೇ ಆರು ಜನರು ಸದಸ್ಯರು 30 ವರ್ಷ ಲೀಜ್ ಮೇಲೆ ಪಡೆಯಲು ಅರ್ಜಿ ಸಲ್ಲಿಸಲಾಗಿದ್ದು ಅದು ಅಂತಿಮ ಹಂತದಲ್ಲಿದೆ
ಉಳಿದ 6 ವಾಣಿಜ್ಯ ನಿವೇಶನಗಳಿಗೆ ಬೇಡಿಕೆ ಬಂದಿದ್ದು ಲಿಜ್ ಮೇಲೆ 30 ವರ್ಷ ನೀಡಲು ಪ್ರಕಟಣೆ ಹೊರಡಿಸಲು ಅನುಮತಿಗಾಗಿ ಮಹಾಸಭೆಯ ಮುಂದೆ ಮಂಡಿಸಿದೆ.

ಅಲ್ಲಮಪ್ರಭು ಕಾಲೋನಿ ಗೆ ಮತ್ತು ಸಂಘಕ್ಕೆ ಶ್ರೀ ಸನ್ಮಾನ್ಯ ನಗರದ ಶಾಸಕರಾದ ಡಾಕ್ಟರ್ ಎಸ್. ಪಾಟೀಲ್ ಮತ್ತು
ಮಾನ್ಯ ನಗರಸಭೆಯ ವಾರ್ಡ್ ನಂಬರ್ 28 ಮತ್ತು 29 ಸದಸ್ಯರು ಸಂಘದ ಪ್ರತಿಯೊಂದು ಚಟುವಟಿಕೆಗಳಿಗೆ ಅಭಿವೃದ್ಧಿ ಕಾರ್ಯಕ್ಕೆ ತಕ್ಷಣವೇ ಸ್ಪಂದನೆ ನೀಡುತ್ತಿರುವುದರಿಂದ ಸದರಿಯವರಿಗೆ ನಾನು ವೈಯಕ್ತಿಕವಾಗಿ ಹಾಗೂ ಸಂಘದ ಸದಸ್ಯರು ಹಾಗೂ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಈ ಸಂಘವು ನಗರದಲ್ಲಿ ಉತ್ತಮ ಬಡಾವಣೆಯಾಗಲು ತಮ್ಮೆಲ್ಲರ ಅಖಂಡ ಸಹಕಾರದಿಂದ ಮಾತ್ರ ಸಾಧ್ಯವೆಂದು ತಿಳಿಸುತ್ತಾ ತಮ್ಮೆಲ್ಲರಿಗೆ ಇನ್ನೊಮ್ಮೆ ಅಭಿನಂದಿಸಿ 2023/2024ನೇ ಸಾಲಿನಲ್ಲಿಯ ಸಮಗ್ರ ವರದಿ ಹಾಗೂ ಲೆಕ್ಕಪತ್ರ ಮುಂಗಡಪತ್ರಗಳನ್ನು ಮಹಾ ಸಭೆಯಲ್ಲಿ ಮಂಜರಿಗಾಗಿ ಮಂಡಿಸುತ್ತೇವೆ
ಈ ಸಂದರ್ಭದಲ್ಲಿ ,ಏನ್ ಅಧ್ಯಕ್ಷರು ಶರಣಪ್ಪ

ನಿರ್ದೇಶಕರು ಎಸ್ ಎಸ್ ಬಿರಾದರ್.,ಎಂ ಕೃಷ್ಣಮೂರ್ತಿ.ಸುಭಾಷ್ ಚಂದ್ರ.ಬಾಷುಮಿಯ.ಪಿ ಬಿ ಬಳಿಗಾರ.ಶ್ರೀಮತಿ ರೇಖಾ,ಶ್ರೀಮತಿ ಕೆ ಲಕ್ಷ್ಮೀದೇವಿ,ಉಪಸ್ಥಿತರಿದ್ದರು.

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!