Ad imageAd image

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟೌಟ್‌ಗೆ ಹಾಲಿನ ಅಭಿಷೇಕ

Bharath Vaibhav
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟೌಟ್‌ಗೆ  ಹಾಲಿನ ಅಭಿಷೇಕ
WhatsApp Group Join Now
Telegram Group Join Now

ಬೀದರ: ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಳಕೇರಾ ಗ್ರಾಮದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮಾಣಿಕ ಹಿಪರ್ಗಿ ಅವರ ನೇತೃತ್ವದಲ್ಲಿ ಶನಿವಾರ ಸಾಯಂಕಾಲ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಸಂಗೊಳ್ಳಿ ರಾಯಣ್ಣನ ಭಾವಚಿತ್ರದ ‌ಕಟೌಟ್‌ಗೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ ಮಾಡಿ,ಪಟಾಕಿ ಸಿಡಿಸಿ,ಡೊಳ್ಳು ಕುಣಿತದೊಂದಿಗೆ ಸಂಭ್ರಮಿಸಿ ಜೈಕಾರ ಕೂಗಲಾಯಿತು.

ಸಿದ್ದರಾಮಯ್ಯನವರು ಎರಡು ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡುತ್ತಾ ಬರುತ್ತಿದ್ದಾರೆ.ಅವರ ಮೇಲೆ ಸುಖಸುಮ್ಮನೆ ಆರೋಪ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹುನಾರ ನಡೆಸುತ್ತಿದ್ದಾರೆ.ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲದೆ ಆಡಳಿತ ನೀಡಿದ ಕರ್ನಾಟಕದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ರೆ ಅದು ಸಿದ್ದರಾಮಯ್ಯ ಮಾತ್ರ.

ರಾಜಪಾಲರು ರಾಜಕೀಯ ಒತ್ತಡದಿಂದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದು ನಿಜಕ್ಕೂ ನೋವಿನ ಸಂಗತಿಯಾಗಿದೆ.ರಾಜ್ಯದಲ್ಲಿ ಹಾಲಿನಂತೆ ಸರ್ಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ಯಾವುದೇ ಕಪ್ಪು ಚುಕ್ಕೆ ಬಾರದಿರಲಿ ಎಂದು ಪ್ರಾರ್ಥಿಸಿ ಹಾಲಿನ ಅಭಿಷೇಕ ಮಾಡಲಾಗಿದೆ ಎಂದು ನೇತೃತ್ವವಹಿಸಿದ ಮಾಣಿಕ ಹಿಪ್ಪರಗಿ ಹೇಳಿದರು.

ಈ ಸಂದರ್ಭದಲ್ಲಿ ಸಂತೋಷ ಹಿಪರ್ಗಿ,ಸಿದ್ದು ಹಿಪರ್ಗಿ,ಈರಪ್ಪ ಮೈಸಗೊಂಡ,ಸಂಜು ಭೈರನಳ್ಳಿ,ಸಂಗ್ರಾಮ ಬುಡ್ಡಿ,ರವಿ ಹೊಗಾಡಿ,ಮಲ್ಲಿಕಾರ್ಜುನ,ತುಕಾರಾಮ ತಳಪಳ್ಳಿ,ಶಿವರಾಜ ಬುಡ್ಡಿ,ಮಲ್ಲಿಕಾರ್ಜುನ ಬಾಬನೂರ್,ಮಾಣಿಕ ತಳಪಳ್ಳಿ,ಮಹೇಶ ಮಹಾಂತೇಶ ಮಾದಪನೋರ್,ಝರೇಪ್ಪ ಬುಡ್ಡಿ, ಮಾರುತಿ ಬುಡ್ಡಿ,ಹಣಮಂತ ಮಾದಪ್ಪನೋರ್, ಸಂತೋಷ್ ವಗ್ಗಿ,ಕುಪೇಂದ್ರ ಬುಡ್ಡಿ,ಸುನೀತಾ ಹೂಗಾಡಿ,ಸವಿತಾ ಹೂಗಾಡಿ,ಮವಿತಾ,ಸುನೀತಾ ಸೇರಿದಂತೆ ಗೊಂಡ ಸಮಾಜದ ಮುಖಂಡರು,ಮಹಿಳೆಯರು,ಯುವಕರು,ಮಕ್ಕಳು ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ಉಪಸ್ಥಿತರಿದ್ದರು.

 

ಸಜೀಶ ಲಂಬುನೋರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!