Ad imageAd image

ಫೇಸ್ ಬುಕ್ ವಿಡಿಯೋ ಮಾಡಿಟ್ಟು ಮತ್ತೋರ್ವ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ 

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: ಫೇಸ್ ಬುಕ್ ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ನಲ್ಲಿ ನಡೆದಿದೆ.

ಪ್ರವೀಣ್ ಗೌಡ ಬೇಲೂರು ಆತ್ಮಹತ್ಯೆಗೆ ಶರಣಾಗಿರುವ ಬಿಜೆಪಿ ಕಾರ್ಯಕರ್ತ. ತನಗೆ ಹಲವರು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ತನಗೆ ಕಿರುಕುಳ ನೀಡುತ್ತಿರುವವರ ಹೆಸರನ್ನು ರೆಕಾರ್ಡ್ ಮಾಡಿಟ್ಟು ಪ್ರವೀಣ್ ಗೌಡ ಸಾವಿಗೆ ಶರಣಾಗಿದ್ದಾರೆ.

ಆನೇಕಲ್ ಪಟ್ಟಣದ ಎಸ್.ವಿ.ಎಂ.ಸ್ಕೂಲ್ ಬಳಿ ಪ್ರವೀಣ್ ನೇಣಿಗೆ ಕೊರಳೊಡ್ಡಿದ್ದಾರೆ. ಸಾವಿಗೂ ಮುನ್ನ ಮಾಡಿಟ್ಟಿರುವ ವಿಡಿಯೋದಲ್ಲಿ ಕಳೆದ ಎರಡು ತಿಂಗಳಿಂದ ಮಾನಸಿಕವಾಗಿ ನೊಂದಿದ್ದೇನೆ. ನನಗೆ ಹಲವರು ಕಿರುಕುಳ ನೀಡುತ್ತಿದ್ದಾರೆ.

ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಹಲವರು ನೇರ ಕಾರಣ. ಸಮಂದೂರು ಕಿರಣ, ಗೋಕುಲ್ ಫ್ಯಾಷನ್ ಹರೀಶ್, ಭಾಸ್ಕರ್ ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ, ಸರವಣ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಿ ಸಾವನ್ನಪ್ಪಿದ್ದಾರೆ.

ಯಾರನ್ನು ಬಿಟ್ಟರೂ ಕಿರಣ್ ನನ್ನು ಮಾತ್ರ ದಯವಿಟ್ಟು ಬಿಡಬೇಡಿ. ಕಿರಣ್ ಹಲವು ಹೆಣ್ನುಮಕ್ಕಳಿಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದಾನೆ. ಕಿರಣ್ ಮಾಡುವ ಇಂತಹ ಕೆಲಸಗಳೆಲ್ಲ ನನ್ನ ಮೇಲೆ ಬಂದಿವೆ ಎಂದು ವಿಡಿಯೋ ರೆಕಾರ್ಡ್ ನಲ್ಲಿ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ತನಿಖೆ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!