Ad imageAd image

ಮತ್ತೂಮ್ಮೆ ಉತ್ತಮ ಫಲಿತಾಂಶ ನಿವೇದಿತ ಆಂಗ್ಲ ಮಾಧ್ಯಮ ಶಾಲೆ

Bharath Vaibhav
ಮತ್ತೂಮ್ಮೆ ಉತ್ತಮ ಫಲಿತಾಂಶ ನಿವೇದಿತ ಆಂಗ್ಲ ಮಾಧ್ಯಮ ಶಾಲೆ
WhatsApp Group Join Now
Telegram Group Join Now

ಕಂಪ್ಲಿ : ಪಟ್ಟಣದ ನಿವೇದಿತ ಆಂಗ್ಲ ಮಾಧ್ಯಮ ಶಾಲೆಯು ಮತೊಮ್ಮೆ ಉತ್ತಮ ಫಲಿತಾಂಶ ನೀಡಿ ಅತ್ತ್ಯುತ್ತಮ ಸಾಧನೆಯೊಂದಿಗೆ ಹತ್ತನೇ ತರಗತಿಯಲ್ಲಿ ಶೇಕಡಾ 88.23% ಫಲಿತಾಂಶ ಪಡೆದಿದೆ.

ಪ್ರಸಕ್ತ ಶೈಕ್ಷಣಿಕ 2024-25ನೇ ಸಾಲಿನ 10ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕಂಪ್ಲಿ ಭಾಗದಲ್ಲಿ ಕಳೆದ ವರ್ಷ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ ಭಾರೀ ಸದ್ದು ಮಾಡುತ್ತು, ಈ ವರ್ಷವೂ ಕೂಡ ನಿವೇದಿತ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ 88.23% ರಷ್ಟು ಫಲಿತಾಂಶದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ಕಳೆದ ವರ್ಷ ಸತತ 7ನೇ ವರ್ಷಗಳ ಕಾಲನೂರಕ್ಕೆ ನೂರರಷ್ಟು ಪಲಿತಾಂಶವನ್ನು ಪಡೆದುಕೊಂಡಿತ್ತು.

ಅದೆ ರೀತಿ ಈ ವರ್ಷವೂ ಕೂಡ ನಿವೇದಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯ ಒಟ್ಟು 17 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 15 ಪ್ರಥಮ ದರ್ಜೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ವಿಶೇಷವಾಗಿದೆ. ಇನ್ನು
ಇಬ್ಬರು ವಿದ್ಯಾರ್ಥಿಗಳು ಮಾತ್ರ ತಲಾ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿ ಶೇಕಡಾ ಶಾಲೆಗೆ ಶೇಕಡಾ 88.23% ರಷ್ಟು ಫಲಿತಾಂಶ ನೀಡಿದ್ದಾರೆ.

ಇದರಲ್ಲಿ ಪ್ರಥಮ ಸ್ಥಾನ ಕೆ. ಶ್ರೀ ಗೌರಿ 604(625) 96.64% (ಕಂಪ್ಲಿ) ದ್ವಿತೀಯ ಸ್ಥಾನ ಎಂ. ಲಾವಣ್ಯ 566(625) 90.56%(ಸಣಾಪುರ) ತೃತೀಯ ಸ್ಥಾನ ಕೋಸೀಗಿ ಲಿಖಿತ 548(625) 87.68%(ಕೊಟ್ಟಾಲ್) ಚತುರ್ಥ ಸ್ಥಾನ ಯೋಗೇಶ್ ಟಿ.ಎಚ್.ಎಂ. 521(625)82.88% (ಸಾಣಾಪುರ) ಹಾಗೂ ಜ ಎಸ್ ಪುಷ್ಪಾ 518(625)82.88%(ಚಿಕ್ಕ ಜಂತಕಲ್) ಐದನೇ ಸ್ಥಾನ ಪಡೆಯುವುದರ ಮೂಲಕ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಮಾತಾ ಮೊಂಟಸರಿ ವಿದ್ಯೆ ಸಂಸ್ಥೆ (ರಿ) ಶ ಕಾರ್ಯದರ್ಶಿ ಶ್ರೀಯುತ ಕೆ ರಾಮು ಹಾಗೂ ಅಧ್ಯಕ್ಷರಾದ ಹೆಚ್ ಮರಿಯಪ್ಪ ಮತ್ತು ಮುಖ್ಯ ಶಿಕ್ಷಕಿ ಯಾದ ಎಂ ಪುಪ್ಪಾ ಸಂತಸ ಹಂಚಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಹಾಗೂ ಮೌಲ್ಯಯುತ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಯಶಸ್ಸು ಸಿಕ್ಕಿರುವುದು ಬಹಳ ಸಂತೋಷ ನೀಡಿದೆ. ಶೇಕಡಾ 88.23% ರಷ್ಟು ಫಲಿತಾಂಶ ಗಳಿಸುವಲ್ಲಿ ಹಗಲಿರುಳು ಶ್ರಮಿಸಿದ ವಿದ್ಯಾರ್ಥಿಗಳಿಗೆ, ಪ್ರಾಂಶುಪಾಲರಿಗೂ, ಎಲ್ಲಾ ಭೋದಕ ಮತ್ತು ಸಿಬ್ಬಂದಿ ವೃಂದದವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!