Ad imageAd image

ಕಾಂತಾರ-2 ಚಿತ್ರ ತಂಡಕ್ಕೆ ಮತ್ತೊಂದು ವಿಘ್ನ : ಓರ್ವ ಜೂನಿಯರ್ ಕಲಾವಿದ ಸಾವು 

Bharath Vaibhav
ಕಾಂತಾರ-2 ಚಿತ್ರ ತಂಡಕ್ಕೆ ಮತ್ತೊಂದು ವಿಘ್ನ : ಓರ್ವ ಜೂನಿಯರ್ ಕಲಾವಿದ ಸಾವು 
WhatsApp Group Join Now
Telegram Group Join Now

ಉಡುಪಿ : ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ತೀವ್ರ ಆಘಾತವಾಗಿದ್ದು, ಕಾಂತಾರ ಚಿತ್ರದ ಪ್ರೀಕ್ವೆಲ್ ಕಾಂತಾರ-2 ಚಿತ್ರೀಕರಣದ ವೇಳೆ ಘೋರ ದುರಂತ ಇಂದು ಸಂಭವಿಸಿದೆ.

ಕಾಂತಾರ-2 ಚಿತ್ರ ತಂಡಕ್ಕೆ ಮತ್ತೊಂದು ವಿಘ್ನ ಎದುರಾಗಿದ್ದು, ಶೂಟಿಂಗ್ ಸೆಟ್​​​​ನಲ್ಲಿದ್ದ ಓರ್ವ ಜೂನಿಯರ್ ಕಲಾವಿದ ಸಾವನ್ನಪ್ಪಿದ್ದಾರೆ.

ಕೇರಳ ಮೂಲದ ಕಪಿಲ್ ಎಂಬ ಜೂನಿಯರ್ ಆರ್ಟಿಸ್ಟ್​​ ಬೈಂದೂರಿನ ಕೊಲ್ಲೂರಿನಲ್ಲಿ, ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೊಮ್ಮೆ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಕರೆ ತರಲಾಗುತ್ತಿದ್ದ ಡ್ಯಾನ್ಸರ್ಸ್​ ಗಳಿದ್ದ ವಾಹನವು ಅಪಘಾತಕ್ಕೀಡಾಗಿತ್ತು. ಸಿನಿಮಾ ತಂಡಕ್ಕೆ ಒಂದಿಲ್ಲ ಒಂದು ಸಂಕಷ್ಟ ಎದುರಾಗುತ್ತಿರುವುದು ಇಡೀ ಚಿತ್ರ ತಂಡದ ಕಲಾವಿದರ ಪರಿಸ್ಥಿತಿ ಆಘಾತಕ್ಕೆ ದೂಡಿದಂತಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!