Ad imageAd image

ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಾಗದು ಎಂಬುದು ಮತ್ತೇ ಸಾಬೀತು

Bharath Vaibhav
ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಾಗದು ಎಂಬುದು ಮತ್ತೇ ಸಾಬೀತು
WhatsApp Group Join Now
Telegram Group Join Now

ಶಿವಮೊಗ್ಗ: ತೀರ್ಥಹಳ್ಳಿಯ ಪ್ರಮೀಳಾ ನಾಯಕ್ ಎಂಬವರು ತಮ್ಮ‌ 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ್ದಾರೆ.

ಪ್ರಮೀಳಾ ಇಲ್ಲಿನ ಎ.ಕೆ.ರಸ್ತೆ ನಿವಾಸಿ ಪ್ರಶಾಂತ್ ನಾಯಕ್ ಅವರ ಪತ್ನಿ. 2024-25ನೇ ಸಾಲಿನಲ್ಲಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು, ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಇವರಿಗೆ ಓರ್ವ ಪುತ್ರ ಇದ್ದು, ಸಿಂಗಾಪುರದಲ್ಲಿ ಖಾಸಗಿ‌ ಕಂಪನಿಯ ಉದ್ಯೋಗಿಯಾಗಿದ್ದಾರೆ. ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳಿದ್ದಾರೆ.

ಪ್ರಮೀಳಾ ನಾಯಕ್ ಅವರು ತಮ್ಮ ಭಾವನ ಮೊಮ್ಮಗನ ಉಪನಯನ ಕಾರ್ಯಕ್ರಮದಲ್ಲಿ, “ನಾನು ಪರೀಕ್ಷೆ ಬರೆದು ಒಂದು ಮಾರ್ಕ್ಸ್ ಕಾರ್ಡ್ ಪಡೆಯಬೇಕು” ಎಂದು ಹೇಳಿದ್ದರಂತೆ. ಅದರಂತೆ ಶ್ರೀದತ್ತ ಮತ್ತು ಮಾನಸ ಎಂಬಿಬ್ಬರು ಶಿಕ್ಷಕರ ಬಳಿ ತಮ್ಮ ಭಾವನ ಮೊಮ್ಮಗನ ಜೊತೆ ತಾವೂ ಟ್ಯೂಷನ್​ಗೆ ಹೋಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!