ಏಷ್ಯಾ ಸಂಘರ್ಷಕ್ಕೆ ಸಂಬAಧಿಸಿದAತೆ ಇರಾನ್‌ಗೆ ನೀಡಿರುವ ಕಾಲಾವಕಾಶದ ಸಮಯ ಮುಗಿಯಲು ಬಂದಿದ್ದು, ಈಗಲಾದರೂ ಹೋರ್ಮುಜ್ ಜಲಸಂಧಿ ಮಾರ್ಗ ಮುಕ್ತಗೊಳಿಸದಿದ್ದರೆ ಇರಾನ್‌ನ ಈಡೀ ಸಮುದಾಯ ಸಾಯುತ್ತದೆ ಎಂದು ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಮತ್ತೊಮ್ಮೆ ಇರಾನ್‌ಗೆ ಎಚ್ಚರಿಸಿದ್ದಾರೆ.
ಒಮ್ಮೆ ಇರಾನ್‌ನ ಸಮುದಾಯ ಇನ್ನಿಲ್ಲವಾದರೆ ಮತ್ತೇ ಬರಲಾರದು. ಹಾಗೇ ಆಗಬಾರದು ಎಂದು ನನ್ನ ಆಸೆ. ಆದರೆ ಅದೇ ಆಗುವ ಸಾಧ್ಯತೆ ಇದೆ ಎಂದಿರುವ ಡೋನಾಲ್ಡ್ ಟ್ರಂಫ್ ಇಂದು ರಾತ್ರಿ ಎಲ್ಲವೂ ಮುಗಿದು ಹೋಗುತ್ತದೆ. ಹಾಗಾಗಬಾರದು ಎಂದರೆ ಇರಾನ್ ಕೂಡಲೇ ಹೋರ್ಮುಜ್ ಜಲಸಂಧಿ ಮುಕ್ತಗೊಳಿಸಬೇಕೆಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಯಾರಿಗೆ ಗೊತ್ತು? ಏನೂ ಆಗುವುದು ಇದೆಯೋ ಅದೇ ಆಗುವುದು. ಇರಾನ್‌ನ ಒಳ್ಳೆಯ ಜನರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಭಾವನಾತ್ಮಕ ಎಚ್ಚರಿಕೆ ನೀಡಿದ್ದಾರೆ ಡೋನಾಲ್ಡ್ ಟ್ರಂಫ್.
ಇರಾನ್ ವಿರುದ್ಧ ಮತ್ತೇ ಗುಡುಗಿದ ಟ್ರಂಫ್




