Ad imageAd image

ಮಾದಕ ವಸ್ತು ವಿರೋಧಿ ದಿನೋತ್ಸವ ಹಾಗೂ ನಶೆಮುಕ್ತ ಭಾರತ ಅಭಿಯಾನ

Bharath Vaibhav
ಮಾದಕ ವಸ್ತು ವಿರೋಧಿ ದಿನೋತ್ಸವ ಹಾಗೂ ನಶೆಮುಕ್ತ ಭಾರತ ಅಭಿಯಾನ
WhatsApp Group Join Now
Telegram Group Join Now

ಸಿರುಗುಪ್ಪ: ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಮೈತ್ರಿ ವ್ಯಸನ ಮುಕ್ತ ಕೇಂದ್ರಗಳ ಸಹಯೋಗದಲ್ಲಿ ನಡೆದ ನಶಾ ಮುಕ್ತ ಅಭಿಯಾನದಡಿ ಜರುಗಿದ ಮಾದಕ ವಸ್ತು ವಿರೋಧಿ ದಿನೋತ್ಸವದ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮನೋಹರ ಅವರು ಚಾಲನೆ ನೀಡಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಜರುಗಿದ್ದು, ವಿಶೇಷ ಚೇತನರಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರ ಅಂಗವಿಕಲ ಪುನರ್ವಸತಿ ಕಾರ್ಯಕರ್ತ ಈರನಾಗಪ್ಪ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಿವಿಧ ಇಲಾಖೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರದಿಂದ ನಶೆ ಮುಕ್ತ ಭಾರತದ ಅಭಿಯಾನದಡಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಯುವಕರು ಅತಿಹೆಚ್ಚು ಮದ್ಯ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ವ್ಯಸನಿಗಳಾಗುತ್ತಿದ್ದಾರೆ.

ಮಾದಕ ವಸ್ತುಗಳು ಆರೋಗ್ಯಕ್ಕೆ ಹಾನಿಕಾರವಾಗಿವೆ. ಅಲ್ಲದೇ ಸಮಾಜದಲ್ಲಿ ಕೆಟ್ಟದಾದ ಪರಿಣಾಮ ಬೀರುತ್ತದೆ. ಮದ್ಯ ಮತ್ತು ಮಾದಕ ವಸ್ತು ಬಳಕೆಯನ್ನು ದೂರವಿದ್ದು, ಸುಖಿ ಸಮಾಜವನ್ನು ನಿರ್ಮಿಸೋಣವೆಂದರು.
ಜಾಗೃತಿ ವೇಳೆ ಯುವಕರು ರಾಷ್ಟ್ರದ ಶಕ್ತಿಯಾಗಿರುತ್ತಾರೆ. ಸಮಾಜ, ದೇಶದ ಅಭಿವೃದ್ದಿಯ ಕೊಡುಗೆಯನ್ನು ನೀಡುವಲ್ಲಿ ಪ್ರಮುಖ ಪಾತ್ರವಾಗಿರುತ್ತದೆ.
ಆದ್ದರಿಂದ ಅತಿಹೆಚ್ಚು ಯುವಕರು ತಂಬಾಕು, ದೂಮಪಾನ, ಮದ್ಯಪಾನ, ಮಾದಕ, ದ್ರವ್ಯ ವಸ್ತುಗಳಿಂದ ದೂರವಿದ್ದು, ನಶೆಮುಕ್ತ ಭಾರತವನ್ನು ನಿರ್ಮಿಸಲು ಮುಂದಾಗಲು ಪ್ರತಿಜ್ಞೆಯನ್ನು ಮಾಡಿಸಲಾಯಿತು.
ಇದೇ ವೇಳೆ ತಾಲೂಕು ವಿವಿಧೋದ್ದೇಶ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತ ಸಾಬೇಶ, ನಗರ ಮತ್ತು ಪಟ್ಟಣ ಪಂಚಾಯಿತಿ ಪುನರ್ ವಸತಿ ಕಾರ್ಯಕರ್ತರಾದ ಈರನಾಗಪ್ಪ, ಈರಮ್ಮ, ನೇತ್ರಾವತಿ, ಅಂಬಣ್ಣ, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಮುದಿಯಪ್ಪ, ನಾಗರಾಜ, ಬಸವರಾಜ, ಪಂಪನಗೌಡ, ಆನಂದಗಿರಿ, ಹುಸೇನಪ್ಪ ಸೇರಿದಂತೆ ಸಾರ್ವಜನಿಕರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!