ಬಾದಾಮಿ:- ಬಾಗಲಕೋಟೆ ಜಿಲ್ಲಾ ಪೊಲೀಸ್ ಬಾಗಲಕೋಟೆ ಉಪವಿಭಾಗ ಬಾದಾಮಿ ವೃತ್ತ ಬಾದಾಮಿ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮಾದಕ ಧೃವ್ಯ ವಿರೋಧಿ ದಿನಾಚರಣೆ.ಬಾಗಲಕೋಟೆ ಜಿಲ್ಲಾ ಪೊಲೀಸ್ ಬಾಗಲಕೋಟೆ ಉಪವಿಭಾಗ ಬಾದಾಮಿ ವೃತ್ತ ಬಾದಾಮಿ ಪೊಲೀಸ್ ಠಾಣೆಯಿಂದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಬಾದಾಮಿಯ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎನ್ನುವುದರ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಲಾಯಿತು.. ವಿದ್ಯಾರ್ಥಿ ಜೀವನವನ್ನು ಮಾದಕ ದ್ರವ್ಯಗಳಿಂದ ದೂರವಿದ್ದು ಉಜ್ವಲ ಭವಿಷ್ಯ ಕಂಡು ಉತ್ತಮ ಭವಿಷ್ಯ ನಿರ್ಮಿಸಿಕೊಂಡು ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಆಡಿಷನಲ್ ಎಸ್ ಪಿ ಮಹಾಂತೇಶ್ ಸರ್, ಹುನಗುಂದ್ ಡಿ ವಾಯ್ ಎಸ್ ಪಿ, ಬಾದಾಮಿ ಸಿ ಪಿ ಐ ಕರಿಯಪ್ಪ ಬನ್ನಿ, ಬಾದಾಮಿ ಪಿ ಎಸ್ ಐ ವಿಠಲ್ ನಾಯಿಕ, ಕ್ರೈಮ್ ಪಿ ಎಸ್ ಐ ವಿಜಯಕುಮಾರ್ ರಾಠೋಡ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಕಾಳಿದಾಸ ಶಿಕ್ಷಣ ಸಂಸ್ಥೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ