Ad imageAd image

ಟೀಕಾಕಾರರಿಗೆ ಅನುಶ್ರೀ ತಿರುಗೇಟು

Bharath Vaibhav
ಟೀಕಾಕಾರರಿಗೆ ಅನುಶ್ರೀ ತಿರುಗೇಟು
WhatsApp Group Join Now
Telegram Group Join Now

ಕರಾವಳಿ ಚೆಲುವೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಕನ್ನಡ ಕಿರುತೆರೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾ ಜನರಿಗೆ ಮನರಂಜನೆ ನೀಡುವ ಅನುಶ್ರೀ ಅವರ ನಿರೂಪಣೆಯನ್ನು ಕಿತ್ತುಕೊಳ್ಳಲು ಕೆಲವರು ಹುನ್ನಾರ ಮಾಡಿದ್ದಾರೆ.

ಸ್ಪಷ್ಟವಾಗಿ ಕನ್ನಡವನ್ನ ಮಾತನಾಡುತ್ತಾ ಎಲ್ಲಾರನ್ನು ಮಾತಿನಲ್ಲೇ ಸೆಳೆಯುವ ಅನುಶ್ರೀ ಅವರ ನಿರೂಪಣೆಗೂ ತೀವ್ರ ವಿರೋಧ ಕೇಳಿ ಬರುತ್ತಿದೆ. ಸಾಕಷ್ಟು ಬಾರೀ ವಿರೋಧ ಕೇಳಿ ಬಂದಿದ್ದು, ಆಂಕರಿಂಗ್ ಅನ್ನು ವಿರೋಧಿಸಿದವರಿಗೆ ಕರಾವಳಿ ಚೆಲುವೆ ಆಂಕರ್‌ ಅನುಶ್ರೀ ತಕ್ಕ ತಿರುಗೇಟು ನೀಡಿದ್ದಾರೆ.

ಆಂಕರ್‌ ಅನುಶ್ರೀ ಯೂಟ್ಯೂಬ್‌ ಚಾನೆಲ್‌ ನಲ್ಲಿ ಕಾಮಿಡಿ ಕಿಲಾಡಿ ಕಾರ್ಯಕ್ರಮದ ಸ್ಪರ್ಧಿಗಳಾದ ಜಗ್ಗಪ್ಪ, ಸೂರಜ್, ನಯನಾ ಹಾಗೂ ಅನುಶ್ರೀ ಅವರು ಕುಳಿತು ಮಾತನಾಡುವಾಗ, ಆಂಕರಿಂಗ್ ಮಾಡುವುದನ್ನು ವಿರೋಧಿಸಿದವರಿಗೆ ನಟಿ ಮತ್ತು ಆಂಕರ್ ಅನುಶ್ರೀ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಜಗ್ಗಪ್ಪ, ಸೂರಜ್, ನಯನಾ ಅವರ ಜೊತೆಗೆ ಅನುಶ್ರೀ ಅವರು ಆಂಕರಿಂಗ್ ಮಾಡುವುದಕ್ಕೆ ವಿರೋಧ ಮಾಡಿದವರ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿಗೆ ಸೇರಿಕೊಳ್ಳಲಿವೆ ಈ ಪಂಚಾಯಿತಿಗಳು, ಇಲ್ಲಿ ಭೂಮಿ ಇದ್ರೆ ನೀವೇ ಕೋಟ್ಯಾಧಿಪತಿಗಳು ಈ ವೇಳೆ ಆಂಕರ್‌ ಅನುಶ್ರೀ ಅವರು ಮಾತನಾಡಿ, ‘ನಾನು ಎಲ್ಲಿಯೇ ನಿರೂಪಣೆಗೆ ಹೋದರೂ ಇವಳು ಬಿಟ್ಟರೆ ಬೇರೆ ಯಾರು ಇಲ್ಲವೇ ನಿಮಗೆ.

ಇವಳನ್ನು ಬಿಟ್ಟರೆ ಬೇರೆ ಆಂಕರ್ ಸಿಗುವುದಿಲ್ಲವೇ ಎಂದು ಕೇಳುತ್ತಾರೆ. ಅಂಥವರಿಗೆ ನಾನು ಹೇಳೋದಿಷ್ಟೇ.. ನಾನು ಕೆಲಸ ಮಾಡ್ತೀನಿ ಗುರು. ಅವರವರ ಕೆಲಸವನ್ನು ಪಡೆಯುವುದು ಅವರ ಟ್ಯಾಲೆಂಟಿನ ಮೇಲೆ. ಅದನ್ನು ಮೊದಲು ನೀವು ತಿಳಿದುಕೊಳ್ಳಿ. ಈಗ ನಯನಾ ಇದಾಳೆ, ನಯನ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಎಂದರೆ ಅದು ನಯನಾ ಟ್ಯಾಲೆಂಟ್. ಇದೀಗ ನಾನು ನಯನಾ ಅಥವಾ ಬೆರೆಯವರ ಬಗ್ಗೆ ಮಾತನಾಡುತ್ತಿಲ್ಲ.

ನನ್ನ ಬಗ್ಗೆ ಬಂದ ಕಾಮೆಂಟ್‌ಗಳ ಬಗ್ಗೆ ನಾನು ಇದೀಗ ಸ್ಪಷ್ಟನೆಯನ್ನು ಕೊಡುತ್ತಿದ್ದೇನೆ ಎಂದು ಅನುಶ್ರೀ ಅವರು ತಿರುಗೇಟು ನೀಡಿದ್ದಾರೆ. ನಿಮಗೆ ಇವಳನ್ನು ಬಿಟ್ರೇ ಬೇರೆ ಆಂಕರ್ ಇಲ್ವಾ ಎಂದು ಕೇಳುವವರು ಇಲ್ಲಿ ಕೇಳಿ. ನನಗೆ ಟಾಕ್ ಬ್ಯಾಕ್ ಕೊಡಬೇಡಿ.. ನನಗೆ ಸ್ಕ್ರಿಪ್ಟ್ ಕೊಡಬೇಡಿ ಆದರೂ ನಾನು ಆಂಕರಿಂಗ್ ಮಾಡುತ್ತೇನೆ. ಹತ್ತು ಗಂಟೆ ಒಂದೇ ವೇದಿಕೆಯಲ್ಲಿ ವೇದಿಕೆ ಮೇಲೆ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ, ಯಾರ ಮುಂದೆಯೂ ಮಾತನಾಡಿಲ್ಲ. ಇಲ್ಲಿ ನಾವೆಲ್ಲರೂ ಒಂದು ಫ್ಯಾಮಿಲಿ ತರಹ ಇರುವುದರಿಂದ ನಾನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದು ಆಂಕರಿಂಗ್‌ ಮಾಡುವುದನ್ನ ವಿರೋಧಿಸಿದರಿಗೆ ನಟಿ ಆಂಕರ್‌ ಅನುಶ್ರೀ ಅವರು ತಿರುಗೇಟು ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!