ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಗೂಳಿಪುರ,ಕೆಂಪನಪುರ ಹೊಮ್ಮ ಹಾಗೂ ಅಂಬಳೆ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಸುಮಾರು ದಿನಗಳಿಂದ ಚಿರತೆ ಅಡ್ಡಾಡುತ್ತಿದೆ.ಹಲವಾರು ಭಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಮೂರುದಿಂದ ಚಿರತೆ ಹೆಜ್ಜೆ ಪತ್ತೆಯಾಗಿದ್ದು,ಗೂಳಿಪುರ ಗ್ರಾಮದ ಮೂಗನಾಯಕರವರ ಕಣ್ಣಿಗೆ ಕಣ್ಣಿಗೆ ಬಿದ್ದಿದೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡುದ್ದು, ಬೊನ್ ತಂದು ಇಡುವುದಾಗಿ ಅಧಿಕಾರಿಗಳು ಹೇಳಿ ಸ್ಥಳಕ್ಕೆ ಭೇಟಿ ನೀಡಿರುವುದಿಲ್ಲ. ಆಗಾಗಿ ಇಲಾಖೆ ಯಿಂದ ಯಾವುದೇ ಪ್ರಯೋಜನೆ ಆಗಿಲ್ಲ ಸಾರ್ವಜನಿಕ ರು ತಿಳಿಸಿದರು. ನಂತರ ಗೂಳಿಪುರ ಗ್ರಾಮದ ರಾಜಣ್ಣ, ನಂಜನಾಯಕ ಎಂಬುವವರು ಮಾತನಾಡಿ ಚಿರತೆಯನ್ನು ಸೆರೆ ಹಿಡಿದು ನಮಗೆ ನಿರ್ಭಿತಿಯಿಂದ ಓಡಾಡಲು ಅನುಕೂಲ ಮಾಡಿಕೊಡಿ ಎಂದು ಇಲಾಖೆಗೆ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ವರದಿ: ಸ್ವಾಮಿ ಬಳೇಪೇಟೆ




