Ad imageAd image

ರಾಜ್ಯದಲ್ಲಿ ನಿನ್ನೆ ಒಂದೇ ದಿನ 6 ಜನ ಹೃದಯಾಘಾತಕ್ಕೆ ಬಲಿ : ಜನರಲ್ಲಿ ಆತಂಕ

Bharath Vaibhav
ರಾಜ್ಯದಲ್ಲಿ ನಿನ್ನೆ ಒಂದೇ ದಿನ 6 ಜನ ಹೃದಯಾಘಾತಕ್ಕೆ ಬಲಿ : ಜನರಲ್ಲಿ ಆತಂಕ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತಕ್ಕೆ ಮಂಗಳವಾರ ಮತ್ತೆ ಆರು ಜನ ಬಲಿಯಾಗಿದ್ದಾರೆ. ಈ ಪೈಕಿ ಹಾಸನದಲ್ಲೇ ಮೂವರು ಸಾವನ್ನಪ್ಪಿದ್ದಾರೆ.

ಹೂಳೆನರಸೀಪುರದ ಸಂಜಯ್, ಹಾಸನ ತಾಲೂಕು ಕೊಮ್ಮೇನಹಳ್ಳಿ ಹರ್ಷಿತಾ ಹಾಗೂ ಬೇಲೂರು ತಾಲೂಕಿನ ರವಿಕುಮಾರ್ ಮೃತರು. ಶಿವಮೊಗ್ಗ ಹೊರವಲಯದಲ್ಲಿ ಶ್ರೀನಿಧಿ ಎಂಬ ವಿದ್ಯಾರ್ಥಿ, ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಇಬ್ಬರು ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ.

ಮದುವೆಯಾದ ಎರಡೇ ತಿಂಗಳಿಗೆ ಯುವಕ ಸಾವು!

ಹಾಸನ ಜಿಲ್ಲೆಯ ಸೋಮನಹಳ್ಳಿಯ ಸಂಜಯ್ (25) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ಎದೆನೋವು ಎಂದು ಆಸ್ಪತ್ರೆಗೆ ಹೋಗಿದ್ದರು.ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ್ದರು.

ಈ ವೇಳೆ ಬೇರೆ ಆಸ್ಪತ್ರೆಗೆ ಹೋಗುವಾಗ ಮೃತಪಟ್ಟಿದ್ದಾರೆ. ಸಂಜಯ್ ಕಳೆದ ಎರಡು ತಿಂಗಳ ಹಿಂದೆ ಅಷ್ಟೇ ಮದುವೆಯಾಗಿತ್ತು ಇದೀಗ ಇವರ ಸಾವಿನಿಂದ ಸಂಜೆ ಕುಟುಂಬಸ್ಥರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಒಂದುವರೆ ತಿಂಗಳ ಬಾಣಂತಿ ಬಲಿ!

ಇನ್ನು ಇದೆ ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಒಂದೂವರೆ ತಿಂಗಳ ಬಾಣಂತಿ ಸಾವನನಪ್ಪಿದ್ದಾರೆ. ಬಾಣಂತನಕ್ಕೆ ಆಯನೂರು ಗ್ರಾಮದ ತವರು ಮನೆಯಲ್ಲಿದ್ದ ಹರ್ಷಿತಾ (22) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನದ ಕೊಮ್ಮೆನಹಳ್ಳಿಯ ಒಂದುವರೆ ತಿಂಗಳ ಬಾಣಂತಿ ಹರ್ಷಿತಾ ಇದೀಗ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಐನೂರು ಗ್ರಾಮದಲ್ಲಿ ಅಕ್ಷಿತ ಸಾವನ್ನಪ್ಪಿದ್ದಾರೆ.

ಬಾಣಂತಕ್ಕೆ ಹರ್ಷಿತಾ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದ ತವರು ಮನೆಯಲ್ಲಿ ಇದ್ದರು. ಇವರು ಹಾಸನದ ಕೊಮ್ಮೇನಹಳ್ಳಿಯ ನಿವಾಸಿಯಾಗಿದ್ದು, ಹೆರಿಗೆ ಬಳಿಕ ತವರಿಗೆ ತೆರಳಿದ್ದರು.

ಮೊನ್ನೆ ರಾತ್ರಿ ಹರ್ಷಿತಾಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೊಮ್ಮೇನಹಳ್ಳಿ ಗ್ರಾಮದಿಂದ ಹರ್ಷಿತಾ ತಮ್ಮ ಪತಿಯನ್ನು ಕರೆಸಿಕೊಂಡಿದ್ದಾರೆ. ಆದರೆ ನಿನ್ನೆ ಬೆಳಗ್ಗೆ ಆಸ್ಪತ್ರೆಗೆ ಕರೆದೋಯ್ಯುವಾಗಲೇ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ದಕ್ಷಿಣಕನ್ನಡದಲ್ಲೂ ಹಾರ್ಟ್ ಅಟ್ಯಾಕ್ ನಿಂದ ವ್ಯಕ್ತಿ ಸಾವು!

ಇನ್ನು ದಕ್ಷಿಣಕನ್ನಡ ಜಿಲ್ಲೆಯ ಗಂಪದಕೋಡಿಯ ವಜ್ರಾಕ್ಷ ಪೂಜಾರಿ (53) ಎನ್ನುವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಪದಕೋಡಿ ಗ್ರಾಮದ ನಿವಾಸಿಯಾಗಿದ್ದಾರೆ. ನಿನ್ನೆ ರಾತ್ರಿ ವಜ್ರಾಕ್ಷ ಪೂಜಾರಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಉಜಿರೆಯ ಖಾಸಗಿ ಆಸ್ಪತ್ರೆಗೆ ವಜ್ರಾಕ್ಷ ಪೂಜಾರಿ ದಾಖಲಾಗಿದ್ದರು ಆಸ್ಪತ್ರೆಯಲ್ಲಿ ವಜ್ರಾಕ್ಷಾ ಪೂಜಾರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗದಲ್ಲಿ ಹಾರ್ಟ್ ಅಟ್ಯಾಕ್ ಗೆ ಸರ್ಕಾರಿ ವೈದ್ಯ ಬಲಿ!

ಅದೇ ರೀತಿ ಶಿವಮೊಗ್ಗದಲ್ಲಿ ಹೃದಯಘಾತಕ್ಕೆ ಸರ್ಕಾರಿ ವೈದ್ಯ ಬಲಿಯಾಗಿದ್ದಾರೆ. ಹೃದಯಘಾತದಿಂದ ಸರ್ಕಾರಿ ವೈದ್ಯ ಸಂದೀಪ್ (48) ಇದೀಗ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಈ ಒಂದು ಘಟನೆ ನಡೆದಿದೆ.

ಸಂದೀಪ್ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾಗಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇದೀಗ ಹೃದಯಘಾತದಿಂದ ಸಂದೀಪ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಾತ್ರೆ ಸೇವಿಸುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು!

ಚಿಕ್ಕಮಂಗಳೂರಿನಲ್ಲೂ ಕೂಡ ಹೃದಯಾಘಾತ ಆತಂಕ ಸೃಷ್ಟಿಸಿದ್ದು, ಮೆಡಿಕಲ್ ನಲ್ಲಿ ಮಾತ್ರೆ ಖರೀದಿಸುವಾಗಲೇ ವ್ಯಕ್ತಿಯೊಬ್ಬರಿಗೆ ಹೃದಯಘಾತವಾಗಿದೆ. ಮಾತ್ರೆ ಸೇವಿಸಲು ನೀರು ಬೇಡುತ್ತಿದ್ದಂತೆ ವ್ಯಕ್ತಿ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಮೃತರು ಕೋಟೆ ಬಡಾವಣೆಯ ವಿಶ್ವನಾಥ್ (50) ಸಾವನಪ್ಪಿದ್ದಾರೆ.

ವಿಶ್ವನಾಥ್ ಅವರು ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಜೂನ್ 26ರಂದು ದೀಪ ನರಸಿಂಗ್ ಹೋಂ ಬಳಿ ಈ ಒಂದು ಘಟನೆ ನಡೆದಿತ್ತು. ಹೃದಯಾಘಾರದಿಂದ ಸಾವನ್ನಪ್ಪಿದ್ದಾರೆ ಎಂದು ವೈದರು ಕೂಡ ದೃಢಪಡಿಸಿದ್ದಾರೆ. ಚಿಕ್ಕಮಗಳೂರಲ್ಲಿ ಎರಡು ತಿಂಗಳಲ್ಲಿ ಒಟ್ಟು 13 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಬಿಜೆಪಿ ಯುವ ಮುಖಂಡ ಸಾವು!

ಇನ್ನು ತುಮಕೂರಿನಲ್ಲಿ ಬಿಜೆಪಿಯ ಯುವ ಮುಖಂಡ ನೀಲಕಂಠ ಸ್ವಾಮಿ, (36) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.ತುಮಕೂರು ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ನೀಲಕಂಠ ಸ್ವಾಮಿ ಇದು ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ರಾಜ್ಯ ಸರ್ಕಾರ ಕೂಡ ಹೃದಯಾಘಾತಕ್ಕೆ ಏನು ಕಾರಣ ಎಂದು ಈಗಾಗಲೇ ಆರೋಗ್ಯ ಇಲಾಖೆ ಒಂದು ಕಮಿಟಿ ಸಹ ರಚನೆ ಮಾಡಿದೆ. ಇಂದು ಬೆಳಿಗ್ಗೆಯಿಂದ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಆರು ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

 

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!