ಸೇಡಂ: ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಕೊಡಮಾಡುವ ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಯನ್ನು ಸೇಡಂನಲ್ಲಿ ಮಹಲರೋಜಾದ ಪೂಜ್ಯ ಮಲ್ಲಿಕಾರ್ಜುನ ಮುತ್ಯಾ ಅವರು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಅಪ್ಪಾಜಿ (ನಿಡಗುಂದಾ) ಅವರಿಗೆ ಪ್ರದಾನ ಮಾಡಿದರು.
ಕಾರಣಾಂತರಗಳಿಂದ ದಾವಣಗೆರೆಗೆ ತೆರಳಿ ಪ್ರಶಸ್ತಿ ಸ್ವೀಕರಿಸಲು ಆಗದ ಕಾರಣ ಕೊರಿಯರ್ ಮೂಲಕ ಬಂದ್ ಪ್ರಶಸ್ತಿ ಪತ್ರ, ಚಿನ್ನದ ಲೇಪನದ ಪದಕವನ್ನು ಪ್ರದಾನ ಮಾಡಲಾಯಿತು.

ಸಾಧನೆಯ ಹಾದಿಯಲ್ಲಿರುವವರು ಎಂದಿಗೂ ವಿರಮಿಸಬಾರದು. ಪ್ರತಿ ಹೆಜ್ಜೆಯನ್ನು ದೃಢ ಮತ್ತು ಸಮಾಜ ಸೇವೆಯ ದೃಷ್ಟಿಕೋನದಲ್ಲಿ ಇಡಬೇಕು. ಸದಾಕಾಲ ಜನರ ಸೇವೆ ಮಾಡುತ್ತಾ ಬೆಳೆಯಬೇಕು ಎಂದು ಶ್ರೀ ಮಲ್ಲಿಕಾರ್ಜುನ ಮುತ್ಯಾ ಇದೇ ವೇಳೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ಕಲಬುರಗಿ ರಂಗಾಯಣ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪ್ರಭಾಕರ್ ಜೋಶಿ, ತೆಲಂಗಾಣದ ಸಮಾಜ ಸೇವಕ ರವಿ ಧರ್ಮಿಧಿ, ವೇಣು, ಅತೀಕ ಪಟೇಲ ಮಹಲರೋಜಾ, ಉದ್ಯಮಿ ಸತೀಶಕುಮಾರ ಕಮನೂರ ಇತರರು ಹಾಜರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




