Ad imageAd image

ತಾಂಡ ಗ್ರಾಮದಲ್ಲಿ ಶಿಶು ರುದ್ರಭೂಮಿಗೆ 5 ಎಕರೆ ಮಂಜೂರಾತಿಗೆ ಮನವಿ.

Bharath Vaibhav
ತಾಂಡ ಗ್ರಾಮದಲ್ಲಿ ಶಿಶು ರುದ್ರಭೂಮಿಗೆ 5 ಎಕರೆ ಮಂಜೂರಾತಿಗೆ ಮನವಿ.
WhatsApp Group Join Now
Telegram Group Join Now

ಸಿರುಗುಪ್ಪ : -ತಾಲೂಕಿನ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆ.ತಾಂಡ ಗ್ರಾಮದಲ್ಲಿ ಶಿಶು ರುದ್ರಭೂಮಿ ಒತ್ತುವರಿಯಾಗಿದ್ದು, ಸರ್ವೆ. ನಂಬರ್ 292ಬಿ ಪೈಕಿ 268 ಎಕರೆ/ 16 ಸೆಂಟ್ಸ್ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ ಶಿಶು ರುದ್ರಭೂಮಿಗಾಗಿ 5 ಎಕರೆ ಹೆಚ್ಚುವರಿ ಜಮೀನು ಮಂಜೂರು ಮಾಡುವಂತೆ ಸಹಾಯಕ ಆಯುಕ್ತ ಪ್ರಮೋದ್ ಅವರಿಗೆ ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಮದ ಹಿರಿಯ ವಕೀಲರಾದ ಟಿ.ವೆಂಕಟೇಶ್‌ನಾಯ್ಕ್ ಕಳೆದ ಐದು ವರ್ಷಗಳ ಹಿಂದೆ ಗ್ರಾಮದಲ್ಲಿ ನಮ್ಮ ಲಂಭಾಣ ಜನಾಂಗದ ಪದ್ದತಿಯಲ್ಲಿ ನಮ್ಮ ಪೂರ್ವಜರು ಬಾಲ್ಯ ಮಕ್ಕಳು, ಮದುವೆಯಾಗುವ ಮುನ್ನವೇ ಮರಣ ಸುವ ಯುವಕರನ್ನು ಅಂತ್ಯ ಸಂಸ್ಕಾರ ಮಾಡುತ್ತಿದ್ದ ಪ್ರತ್ಯೇಕ ರುದ್ರಭೂಮಿ ಸ್ಥಳವನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಸಲ್ಲಿಸಿದ ಹಿನ್ನಲೆ ಗ್ರಾಮಕ್ಕೆ ಸಹಾಯಕ ಆಯುಕ್ತ ಪ್ರಮೋದ್ ಹಾಗೂ ತಹಶೀಲ್ದಾರ್ ವಿಶ್ವನಾಥ ಹಾಗೂ ಭೂಮಾಪಕರ ತಂಡವು ಗ್ರಾಮಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿತು.

ಸಹಾಯಕ ಆಯುಕ್ತರಾದ ಪ್ರಮೋದ್ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ ಸದ್ಯ ಪ್ರತ್ಯೇಕವಾಗಿ ಶಿಶು ರುದ್ರಭೂಮಿಗೆ ಪರ್ಯಾಯ ಜಮೀನಿನ ವ್ಯವಸ್ಥೆ ಮಾಡಲಾಗುವುದು.

ಸಂಬಂದಿಸಿದ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಗ್ರಾಮದಲ್ಲಿನ ಜನಸಂಖ್ಯೆಯ ಅನುಗುಣವಾಗಿ ಅಗತ್ಯ ಜಮೀನು ಮಂಜೂರು ಮಾಡುವುದಾಗಿ ತಿಳಿಸಿದರು.

ಇದೇ ವೇಳೆ ಕಂದಾಯ ನಿರೀಕ್ಷಕ ಕೆ.ಬಿ.ಸುರೇಶ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶ್ರೀನಾಥ್, ತಪಾಸಕರಾದ ಯುವರಾಜ.ಹೆಚ್, ಭೂಮಾಪಕ ಅಧಿಕಾರಿಗಳಾದ ಯಂಜೀರಪ್ಪ, ಮಲ್ಲಿಕಾರ್ಜುನ, ಗ್ರಾಮಲೆಕ್ಕಾಧಿಕಾರಿ ಸುರೇಂದ್ರನಾಥ, ಗ್ರಾಮಸ್ಥರಾದ ಕ್ರಿಷ್ಣಪ್ಪನಾಯ್ಕ, ಮೋತಿನಾಯ್ಕ, ಈರಣ್ಣ ನಾಯ್ಕ ಧನುಸಿಂಗ್, ಭೀಮಾನಾಯ್ಕ, ಇನ್ನಿತರರಿದ್ದರು.

ವರದಿ. ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!