Ad imageAd image

ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಜಂಟಿ ನಿರ್ದೇಶಕರಿಗೆ ಮನವಿ

Bharath Vaibhav
WhatsApp Group Join Now
Telegram Group Join Now

ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಜಂಟಿ ನಿರ್ದೇಶಕರಿಗೆ ಮನವಿ

 

ಬೆಳಗಾವಿ ನಗರದಲ್ಲಿರುವ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಜಂಟಿ ನಿರ್ದೇಶಕರಿಗೆ ಮನವಿ.

 

 

  • ಹೌದು ಇಂದು ಬೆಳಗಾವಿ ನಗರ ಹಾಗೂ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಜನಸಂಖ್ಯೆ ಹೆಚ್ಚಿಗೆ ಇರುವುದರಿಂದ ಬೆಳಗಾವಿ ನಗರದಲ್ಲಿ ಶಿಕ್ಷಣ ಗುಣಮಟ್ಟ ಹಾಗೂ ಬೆಳಗಾವಿ ನಗರ ವಾತಾವರಣ ಒಳ್ಳೆಯದು ಇರುವುದರಿಂದ ಬೆಳಗಾವಿ ನಗರದಲ್ಲಿ ಶಿಕ್ಷಣ ಉತ್ತಮವಾಗಿರುವುದರಿಂದ ಬೆಳಗಾವಿ ನಗರ ಹಾಗೂ ತಾಲೂಕಿನ ಜನರು ಬೆಳಗಾವಿ ನಗರದಲ್ಲಿಯೇ ಉದ್ಯೋಗವನ್ನು ಹಾಗೂ ಉಪಜೀವನವನ್ನು ಅವಲಂಬಿಸಿರುತ್ತಾರೆ.

 

ಪಾಲಕರು ವಸತಿ ಶಾಲೆಯಲ್ಲಿ ಓದಿಸುವುದರಿಂದ ಬೆಳಗಾವಿ ನಗರದಲ್ಲಿರುವ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಅಂದ್ರೆ ಇಗಿದ್ದ ಸಂಖ್ಯೆ 125 ಇದ್ದು, ಇದನ್ನು 150 ರವರೆಗೆ ಇದೇ ಶೈಕ್ಷಣಿಕ ವರ್ಷದಿಂದ ಹೆಚ್ಚಿಗೆ ಮಾಡುವಂತಾಗಬೇಕು ಹಾಗೂ ಮೆಟ್ರಿಕ್ ಪೂರ್ವ ವಸತಿ ಗೃಹಗಳನ್ನು ಕನಿಷ್ಠಪಕ್ಷ ಇನ್ನು ಎರಡು ವಸತಿಗೃಹಗಳು ಹೆಚ್ಚಿಗೆ ಮಾಡಿ ಕಡು-ಬಡುವ ವಿದ್ಯಾರ್ಥಿಗಳಿಗೆ ಬೆಳಗಾವಿ ನಗರದಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಅನುಕೂಲ ಮಾಡಬೇಕಾಗಿ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಮನವಿ ಪತ್ರವನ್ನು ಸಲ್ಲಿಸಿದರು.

 

  1. *ವರದಿ:ಮಂಜುನಾಥ ರಜಪೂತ*
WhatsApp Group Join Now
Telegram Group Join Now
Share This Article
error: Content is protected !!