————————————-ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯಂತೆ ಕಬ್ಬಿಗೆ ದರ ನೀಡಿ
———————————ಜೈ ಕಿಸಾನ್ ರೈತ ಸಂಘಟನೆ ಅಧ್ಯಕ್ಷ ರಮೇಶ್ ಪಾಟೀಲ್ ಹೇಳಿಕೆ
————————————–ರೈತ ಸಂಘಟನೆ ವತಿಯಿಂದ ತಹಶೀಲ್ದಾರರಿಗೆ ಮನವಿ

ನಿಪ್ಪಾಣಿ: ರೈತರ ಕಬ್ಬಿಗೆ ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ನೀಡುವ ದರದಂತೆ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ದರ ಘೋಷಿಸಬೇಕು. ತದನಂತರವೇ ಕಬ್ಬು ಕಟಾವಿಗೆ ಅನುಮತಿ ನೀಡಲಾಗುವುದು. ಈ ಕುರಿತು ಸ್ವಾಭಿಮಾನಿ ರೈತ ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ ಅವರ ಆದೇಶದಂತೆ ನಿಪ್ಪಾಣಿ,ಚಿಕ್ಕೋಡಿ, ತಹಶಿಲ್ದಾರರಿಗೆ ಸೋಮವಾರ ದಿನಾಂಕ 27ರಂದು ಅಧಿಕೃತವಾಗಿ ನಿವೇದನೆ ನೀಡಲಾಗುವುದೆಂದು ಜೈ ಕಿಸಾನ್ ರೈತ ಸಂಘಟನೆ ಅಧ್ಯಕ್ಷ ರಮೇಶ್ ಪಾಟೀಲ್ ತಿಳಿಸಿದರು.
ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ಹಸಿರು ಸೇನೆ ಹಾಗೂ ಜೈ ಕಿಸಾನ್ ರೈತ ಸಂಘಟನೆ ವತಿಯಿಂದ ಆಯೋಜಿಸಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದರು.
ಬರುವ ದಿನಾಂಕ 27ರಂದು ಬೇಡಕಿ ಹಾಳದ ಪ್ರಕಾಶ ತಾರದಾಳೆ ಅವರ ತೋಟದಲ್ಲಿ ಬೆಳಿಗ್ಗೆ 9:00 ಗಂಟೆಗೆ ಭೋಜ, ಬೇಡಕಿಹಾಳ, ಸದಲಗಾ, ಗಳತಗಾ, ಶಮನೆವಾಡಿ ಶಿರದವಾಡ ಸೇರಿದಂತೆ ಗಡಿ ಭಾಗದ ಹಳ್ಳಿಗಳ ಕಬ್ಬು ಬೆಳೆಗಾರರು ತಮ್ಮ ವಾಹನ ಮುಖಾಂತರ ಸೇರಲಿದ್ದು,ಸಭೆ ನಡೆಸಿ, ಅಲ್ಲಿಂದ ಚಿಕ್ಕೋಡಿಯ ಅಸಿಸ್ಟಂಟ್ ಕಮಿಷನರ, ಹಾಗೂ ನಿಪ್ಪಾಣಿ ತಹಶೀಲ್ದಾರರಿಗೆ ನಿವೇದನೆ ನೀಡಲಾಗುವುದು.
ಇದೇ ವೇಳೆ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಲು ಒತ್ತಾಯಿಸಲಾಗುವುದು. ಎಂದು ತಿಳಿಸಿ ಗಡಿಭಾಗದ ಹಳ್ಳಗಳ ರೈತರು ಹಾಜರಿರಬೇಕೆಂದು ವಿನಂತಿಸಿದರು.
ಶಿವಗೊಂಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಿಕೆಪಿಎಸ್ ಅಧ್ಯಕ್ಷ ಡಾ. ಸುದರ್ಶನ್ ಮೂರಾಬಟ್ಟೆ , ದರಿಖಾನ್ ಅಜ್ಜನವರು, ಶೀತಲ ಬಾಗೆ, ರಾಜು ಖಿಚಡೆ, ಪಂಕಜ ತಿಪ್ಪಣ್ಣವರ, ತಾತ್ಯಾಸಾಹೇಬ ಕೇಸ್ತೆ, ರಾಜು ಕಡೋಲೆ, ತಾತ್ಯಾ ಸಾಹೇಬ ಬಸಣ್ಣವರ ಮಾತನಾಡಿ “ಕಬ್ಬು ಬೆಳೆಗಾರರು ಒಗ್ಗಟ್ಟಾಗಿ ಹೋರಾಟ ನಡೆಸಲು ಸನ್ನದ್ಧರಾಗಬೇಕೆಂದು ವಿನಂತಿಸಿದರು. ಸಭೆಯಲ್ಲಿ ಸುಭಾಷ ಚೌಗಲೆ, ಪ್ರಕಾಶ ಗೇಬಿಸೆ,ಮನೋಜ್ ಕೋನಾಪನವರ, ಜಿತೇಂದ್ರ ಟಾಕಳೆ, ಅಣ್ಣಾಸಾಹೇಬ ಭೋಸಲೆ ಸೇರಿದಂತೆ ಸುತ್ತಲಿನ ಹಳ್ಳಿಗಳ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




