ಸೇಡಂ: ತಾಲೂಕಿನ ಸಿಲಾರಕೊಟ್ ಗ್ರಾಮದ ಕುಡಿಯುವ ನೀರಿನ ಬಾವಿಗಳನ್ನು ಸ್ವಚ್ಚಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಗ್ರಾಮಸ್ತರು ಮನವಿ ಮಾಡಿಕೊಂಡಿದ್ದಾರೆ.
ಊರಿನ ಅತಿ ದೊಡ್ಡ ಊರ ಬಾವಿಯ ಸುತ್ತಮುತ್ತಲು ಕಸ ತುಂಬಿ ನೀರು ಕಲುಷಿತವಾಗಿದ್ದು ಅದನ್ನು ಸ್ವಚ್ಚಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಿ ಜನರಿಗೆ ಅನುಕೂಲ ಮಾಡಿಕೊಡಬೇಕು.
ಹಾಗೆ ಊರಿನ ಹರಿಜನವಾಡ ಜನಾಂಗ ಉಪಯೋಗಿಸುವ ಬಾವಿ ಕೂಡ ಮುಳ್ಳು ತಂಟೆ ಬಿದ್ದು ಕಳುಸಿತವಾಗಿರುತ್ತದೆ ಅದನ್ನು ಕೂಡ ಸ್ವಚಾಗೊಳಿಸಬೇಕು ಎಂದು ಗ್ರಾಮಸ್ಥರ ಆಕ್ರೋಶ ಆಗಿರುತ್ತದೆ.
ತಕ್ಷಣವೇ ಎರಡು ಬಾವಿಗಳನ್ನು ಕೂಡ ಸ್ವಚ್ಚ ಮಾಡಿಸಿ ಜನರಿಗೆ ಉಪಯೋಗವಾಗುವಂತೆ ಮಾಡಿಕೊಡುತ್ತೇವೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳು ರಾಮಪ್ಪ ಅವರು ತಿಳಿಸಿದರು.
ನಮ್ಮ ಗ್ರಾಮ ಸ್ವಚತೆ ನಮ್ಮ ಕರ್ತವ್ಯವಾಗಿರುತ್ತದೆ ಅದನ್ನು ನಾನು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಡುವೆ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಡಾ. ಮಧುಸೂಧನ್ ರೆಡ್ಡಿ ಪಾಟೀಲ್ ಹೇಳಿದರು.
ಅತಿ ಶೀಘ್ರದಲ್ಲೇ ಈ ಕೆಲಸವನ್ನು ಮಾಡಿಕೊಡಬೇಕೆಂದು ಸ್ಥಳೀಯರ ಮನವಿ ಆಗಿರುತ್ತದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




