ತಾಳಿಕೋಟಿ: ನಗರದಲ್ಲಿ ದಿನಾಂಕ:- 04-07-2025 ನಮ್ಮ ವಿಜಯಪುರ ಜಿಲ್ಲೆಯ ಅಂಬೇಡ್ಕರ್ ಸೇನೆಯ ತಾಲೂಕು ಸಮಿತಿ ತಾಳಿಕೋಟಿ ವತಿಯಿಂದ ಮಾನ್ಯ ತಹಶೀಲ್ದಾರರು ತಾಳಿಕೋಟಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಮಾಜ ಕಲ್ಯಾಣ ಸಚಿವರಾದ ಡಾಕ್ಟರ್ ಶ್ರೀ ಎಚ್ ಸಿ ಮಾದೇವಪ್ಪ ಸಾಹೇಬರಿಗೆ ನಮ್ಮ ತಾಲೂಕಿಗೆ ಎಸ್ ಎಸ್ ಎಲ್ ಸಿ ನಂತರದ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.

ಇಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಇಲ್ಲದಿರುವುದರಿಂದ ಎಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆಗುತ್ತಿಲ್ಲ ಅನೇಕ ಸಮಸ್ಯೆ ಇದ್ದು ಆದಷ್ಟು ಬೇಗನೆ ವಿದ್ಯಾರ್ಥಿನಿಯರಿಗೆ ವಸತಿ ನಿಲಯವನ್ನು ಸರಕಾರ ಮಂಜೂರು ಮಾಡಿ ಮಹಿಳೆಯರಿಗೆ ಅನುಕೂಲವಾಗುವ ಹಾಗೆ ಮಾಡಬೇಕೆಂಬುದು ನಮ್ಮ ಸಂಘಟನೆಯ ಆಸೆಯಾಗಿದೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾದ ಬಸ್ಸು ಈ ಮಾದರ ತಾಲೂಕು ಅಧ್ಯಕ್ಷರಾದ
ಗೋಪಾಲ್ ಕಟ್ಟಿಮನಿ ನಾಗರಾಜ ಗಜಕೋಶ,ಯಮನಪ್ಪ ನಾಯ್ಕೋಡಿ ಪರಶುರಾಮ್ ತಳವಾರ್ ಭೀಮಾಶಂಕರ್ ಸೋನೋನೆ
ಮೈಬೂಬ್ ಅವಟಿ, ಪರಶುರಾಮ್ ನಾಲತವಾಡ ಬಾಗಪ್ಪ ಕಟ್ಟಿಮನಿ, ಮಡು ಚಲವಾದಿ, ಶಶಿಕುಮಾರ್ ಚಲವಾದಿ ಬಸವರಾಜ್ ತೋಟದ, ಸಾಬಣ್ಣ ಕಡದ್ರಾಳ, ಶಿವಪ್ಪ ಮಾದರ್, ಶೇಖಪ್ಪ ಕಟ್ಟಿಮನಿ.
ವರದಿ: ಕೃಷ್ಣ ರಾಠೋಡ್




