Ad imageAd image

ಸದಲಗಾದಲ್ಲಿ ಉನ್ನತ ದರ್ಜೆಯ ಸಮುದಾಯ ಭವನದ ಅಗತ್ಯ. ಸಮಾಜ ಸೇವಕ ಸಂಜೀವ ಕಾಂಬಳೆ ಅವರಿಂದ ಗಣೇಶ ಹುಕ್ಕೇರಿಯವರಿಗೆ ಮನವಿ

Bharath Vaibhav
ಸದಲಗಾದಲ್ಲಿ ಉನ್ನತ ದರ್ಜೆಯ ಸಮುದಾಯ ಭವನದ ಅಗತ್ಯ. ಸಮಾಜ ಸೇವಕ ಸಂಜೀವ ಕಾಂಬಳೆ ಅವರಿಂದ ಗಣೇಶ ಹುಕ್ಕೇರಿಯವರಿಗೆ ಮನವಿ
WhatsApp Group Join Now
Telegram Group Join Now

ನಿಪ್ಪಾಣಿ:  ಸುಮಾರು 30ಸಾವಿರ ಜನಸಂಖ್ಯೆ ಇರುವ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಲಾಗಿದ್ದು ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ತಾಲೂಕಾ ದರ್ಜೆಯ ಹೊಸ್ತಿಲಲ್ಲಿರುವ ಸದಲಗಾ ಪಟ್ಟಣದ ಈ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆಯಾಗುತ್ತಿದೆ.ಸದಲಗಾ ಸೇರಿ ಸುತ್ತಲಿನ ಹಳ್ಳಿಗಳ ವೃದ್ಧರು, ವಿಕಲಚೇತನರು, ಗರ್ಭಿಣಿಯರು, ಬಡ ಜನತೆಗೆ ಹಾಗೂ ನಾಯಿ, ಹಾವು, ಚೇಳು ಕಡಿದವರಿಗೆ ಮತ್ತು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಔಷಧ ಸೇರಿದಂತೆ ಅನೇಕ ಸೌಲಭ್ಯಗಳ ಕೊರತೆಯಾಗುತ್ತಿದೆ.ಇದೂ ಅಲ್ಲದೆ ಈ ಮೋದಲು 2003 ರಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಭವನದ ದರ್ಜೆಗೇರಿಸಬೇಕೆಂದು ಠರಾವು ಮಂಡಿಸಲಾಗಿದೆ.

ಸದರಿ ವಿಷಯವನ್ನು ಅಧಿವೇಶನದಲ್ಲಿ ಮಂಡಿಸಿ ಸಮುದಾಯ ಭವನಕ್ಕೆ ಮಂಜೂರಿ ಪಡೆದುಕೊಳ್ಳಬೇಕೆಂದು ಸದಲಗಾ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಇವರಿಗೆ ಸಾಮಾಜಿಕ ಕಾರ್ಯಕರ್ತರಾದ ಸಂಜಯ ಕಾಂಬಳೆ ಮನವಿ ಪತ್ರ ಅರ್ಪಿಸಿದರು. ಈ ಸಂದರ್ಭದಲ್ಲಿ ಗಣೇಶ ಹುಕ್ಕೇರಿಯವರು ಮಾತನಾಡಿ ಆದಷ್ಟು ಬೇಗ ಸಮುದಾಯ ಭವನದ ಮಂಜೂರಿ ಪಡೆಯಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸತೀಶ ಪಾಟೀಲ ಪ್ರಶಾಂತ ಕರಂಗಳೆ ಲಕ್ಷ್ಮಿಕಾಂತ ಹಾಲಪ್ಪನವರ, ಉದಯ ಬದನಿಕಾಯಿ, ರಾಜು ವಾಲಿ,ನವೀನ ನವಲೇ, ಅತಾವುಲ್ಲಾ ಮುಜಾವರ, ಸದಾಶಿವ ಹೆಗ್ರೇ ಸೋನು ಗೋಟೆ, ಬಾವುಸಾಹೇಬ ನೌಲೇ ಪ್ರಕಾಶ್ ಹಾಗೂ ಸುಭಾಷ್ ಚಿಟಿನಿಸ್ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

ವರದಿ:ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!