ಹುನಗುಂದ:-ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಕೊರಮ ಹಿತಭೀವೃದ್ದಿ ಸಂಘ ಹುನಗುಂದ ಘಟಕದ ವತಿಯಿಂದ ತಹಶಿಲ್ದಾರರ ನಿಂಗಪ್ಪ ಬೀರಾದರ ಅವರಿಗೆ ,ಹಲ್ಲೆ ಕಂಡಿಸಿ ತಪ್ಪಿತಸ್ಥ ಆರೋಫಿಗಳನ್ನು ಬಂದಿಸಲು ತಹಶಿಲ್ದಾರರ ಮೂಲಕ ಗೃಹ ಸಚಿವ ಜಿ,ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಕಳೆದ ಮೊಹರಮ್ ಹಬ್ಬದ ದಿನ ಅದೆ ಗ್ರಾಮದ ಸಂತೋಷ ವಡ್ಡರ ಹಾಗೂ ಇನ್ನೂ ಕೆಲವರು ೭ ಜನ ಸೇರಿ ಮಾರಣಾಂತಿಕ ಹಲ್ಲೆ ನಡೆಸಿ ಕುತ್ತಿಗೆಗೆ ಚಾಕು ಹಿರಿದು ಕೊಲೆ ಪ್ರಯತ್ನ ನಡೆಸಿದ್ದರು. ಹಲ್ಲೆಗೋಳಗಾದ ಅಮರೇಶ ಭಜಂತ್ರಿ ಬಾಗಲಕೋಟೆಯ ಕಾಸಗಿ ಆಸ್ಪತ್ರೆಯಲ್ಲಿ ಸಾವು ಬದುನ ಮಧ್ಯ ಹೋರಾಟ ಮಾಡುತ್ಗಿದ್ದಾನೆ, ಘಟನೆ ನಡೆದು ೨೫ ದಿನವಾದರೂ ಆರೋಫಿಗಳನ್ನು ಈ ವರೆಗೂ ಪೊಲೀಸ್ ಇಲಾಖೆ ಬಂದಿಸಿಲ್ಲ.
ಬರಿ ಕುಂಟುನೆಪ ಹೇಳಿ ಆರೋಪಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ತಕ್ಷಣ ಆರೋಪಿಗಳನ್ನು ಅತೀ ಶೀಘ್ರದಲ್ಲೇ ಬಂದಿಸಲು ಆದೇಶ ನೀಡಿ ನ್ಯಾಯ ಒದಗಿಸಬೇಕೆಂದು ರಾಜ್ಯ ಗೃಹಮಂತ್ರಿ ಅವರಿಗೆ ಹುನಗುಂದ ತಾಲೂಕಿನ ಕೊರಮ ಸಮಾಜದ ಉಪಾಧ್ಯಕ್ಷ ರೋಮಣ್ಣ ಭಜಂತ್ರಿ, ಹಾಗೂ ಶೇಖಪ್ಪ ಭಜಂತ್ರಿ, ಯುವ ಮುಖಂಡ ಡಿ,ಬಿ,ವಿಜಯಶಂಕರ್, ಮುತ್ತಣ್ಣ ಭಜಂತ್ರಿ, ರಾಮಣ್ಣ ಭಜಂತ್ರಿ, ಹನಮಂತ ಹಿರೇನಿ, ಸುಭಾಸ್ ಭಜಂತ್ರಿ , ದುರಗಪ್ಪ ಭಜಂತ್ರಿ, ಮಹಾಂತೇಶ ಬಿಂಜವಾಡಗಿ, ಶಿವಪುತ್ರಪ್ಪ ಭಜಂತ್ರಿ, ಸಂಗಪ್ಪ ಭಜಂತ್ರಿ ಅನೇಕ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.
ವರದಿ :-ದಾವಲ್ ಸೇಡಂ