Ad imageAd image

ಮಾನ್ಯ ತಹಶೀಲ್ದಾರ ಸಾಹೇಬರು, ಚಿಕ್ಕೋಡಿ ಇವರಿಗೆ ಜೈನಾಪುರ್ ಅಕ್ರಮ ಕುರಿತು ಮನವಿ.

Bharath Vaibhav
ಮಾನ್ಯ ತಹಶೀಲ್ದಾರ ಸಾಹೇಬರು, ಚಿಕ್ಕೋಡಿ ಇವರಿಗೆ ಜೈನಾಪುರ್ ಅಕ್ರಮ ಕುರಿತು ಮನವಿ.
WhatsApp Group Join Now
Telegram Group Join Now

ಚಿಕ್ಕೋಡಿ :-ತಾಲೂಕಿನ ಜೈನಾಪೂರ ಗ್ರಾಮದಲ್ಲಿ ಸಹಕಾರಿ ಪಡ ಜಾಗೆ ಸರ್ವೆ ನಂ 54/ಬ ಇದನ್ನು ಅಕ್ರಮವಾಗಿ ಸಾಗೂವಳಿ ಮಾಡಿದ ದಲಿತ ರೈತರಿಗೆ ಸಕ್ರಮಮಾಡಿ ಸಾಗೂವಳಿ ಚೀಟಿ ನೀಡುವ ಕುರಿತು.

ಈ ಮೇಲ್ಕಂಡ ವಿಷಯಕ್ಕೆ ಸಂಬದಿಸಿದಂತೆ ನಾವು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ರೈತರು ತಮ್ಮಲ್ಲಿ ಈ ಮೂಲಕ ಕಳಕಳಿಯ ವಿನಂತಿಸಿಕೊಳ್ಳುವುದೇನೆಂದರೆ ಜೈನಾಪೂರ ಗ್ರಾಮ ದಲಿತ ರೈತರು ಸುಮಾರು 50 ವರ್ಷಗಳಿಂದ ಸರಕಾರಿ ಗಾರರಾಣದಲ್ಲಿ ಸಾಗುವಳಿ ಮಾಡುತ್ತ ನಮ್ಮ ಕುಟುಂಬದ ನಿರ್ವಹಣೆ ಮಾಡುತ್ತ ಉಪ ಜೀವನ ನಡೆಸುತ್ತಾ ಬಂದಿರುತ್ತೇವೆ.

ಇದಕ್ಕೆ ಸಂಬಂಧಿಸಿದಂತೆ ನಾವು ಸರಕಾರಕ್ಕೆ, ನಮೂನೆ 53 ಹಾಗೂ 57ನೇದ್ದರ ಕಾಯಿದೆಯಡಿಯಲ್ಲಿ ಆನ್ ಲೈನ್ ಗಳಲ್ಲಿ ಚಲನ ಸಹಿತ ಸಲ್ಲಿಸಿರುತ್ತೇವೆ. ಸದರಿ ಅಕ್ರಮ ಜಮೀನುಗಳನ್ನು 4 ಸಕ್ರಮಗೋಳಿಸುವ ಕುರಿತು ಈಗಾಗಲೇ ನಾವು ಮಾನ್ಯ ಜಿಲ್ಲಾಧಿಕಾರಿಗಳು ಮಾನ್ಯ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿಗಳನ್ನು ಸಲ್ಲಿಸಿರುತ್ತೇವೆ.

ಆದರು ಅಹಿತ ನಮ್ಮ ಮನವಿಗೆ ಇಲ್ಲಿಯವರೆಗೆ ಪರಿಹಾರ ದೊರಕಿರಿವುದಿಲ್ಲ ಕಾರಣ ನಾನು ಬಡ ದಲಿತ ಸಮೂದಾಯಕ್ಕೆ, ಸೇರಿದ ರೈತರಿದ್ದು ಆರ್ಥಿಕವಾಗಿ ತೀರಾ ಹಿಂದುಳಿದವರಾಗಿರುತ್ತೇವೆ ಆದ್ದರಿಂದ ನಾವು ಸುಮಾರು ವರ್ಷಗಳಿಂದ ಅಕ್ರಮವಾಗಿ ಸಾಗೂವಳಿ ಮಾಡಿ ನಮ್ಮ ಕುಟುಂಬ ನಿರ್ವಹಣೆ ಮಾಡುತ್ತಿರುವ ಜಮೀನುಗಳನ್ನು ಸಕ್ರಮಗೊಳಿಸಿ ನಮಗೆ ತಲಾ 1 ಎ 16 ಗುಂ ಎಕರೆ ಯಂತೆ ಮಂಜೂರು ಮಾಡಿ ಸಾಗೂವಳಿ ಚೀಟಿಯನ್ನು ವಿತರಿಸಿ ನಮ್ಮ ಬಡ ದಲಿತ ಕುಟುಂಬಗಳಿಗೆ ಜೀವನ ಸಾಗಿಸಲು ಮಂಜೂರು ನೀಡಬೆಕ್ಕಂತ ಈ ಮೂಲಕ ಕೇಳಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಸಿದ್ದಾರ್ಥ್ ಸಿಂಗೆ, ಕೋರ್ ಕಮಿಟಿ ಅಧ್ಯಕ್ಷರು ಸಂಜೀವ್ ಕಾಂಬಳೆ ರಾಜ್ಯ ಸಂಘಟನಾ ಸಂಚಾಲಕರು,ಆನಂದ್ ಅರ್ಬಲೆ, ರಾಜ್ಯ ಸಮಿತಿ ಸದಸ್ಯ, ಪರಶುರಾಮ್ ಟೋನಪೆ ಬೆಳಗಾವಿ ಜಿಲ್ಲಾ ಸಂಚಾಲಕರು,
ಈರಪ್ಪ ಸಂತಾಗೊಳ್ ತಾಲೂಕಾ ಸಂಚಾಲಕರು, ರಾಜು ಗೌರಾಗೊಳ್ ತಾಲೂಕ ಸಂಘಟನಾ ಸಂಚಾಲಕರು, ಅಪ್ಪಾಸಾಬ ಗೌರಾಗೊಳ್ ಮತ್ತು ಮುಂತಾದವರು ಉಪಸ್ಥಿತರಿದ್ದರು,
ಇದೇ ವಿಷಯವನ್ನು ಕುರಿತು ಸಂಜು ಕಾಂಬಳೆ ಅವರು ಮಾತನಾಡಿದರೆ ಬನ್ನಿ ಕೇಳೋಣ.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!