ಐಗಳಿ: -ಅಥಣಿ ತಾಲೂಕಿನ ಐಗಳಿ ಗ್ರಾಮದ ದ್ರಾಕ್ಷಿ ಬೆಳೆಗಾರರಿಗೆ ಇನ್ಸೂರೆನ್ಸ್ ಕಂಪನಿಯವರು ಮಾಡುತ್ತಿರುವ ತಾರತಮ್ಯ ಸರಿಪಡಿಸಲು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಐಗಳಿ ಗ್ರಾಮದ ದ್ರಾಕ್ಷಿ ಬೆಳೆಗಾರರು ಮನವಿ ಸಲ್ಲಿಸಿದರು.
ಪ್ರತಿ ವರ್ಷ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ವಿಮೆ ತುಂಬುತ್ತಿದ್ದಾರೆ ಆದರೆ ಇನ್ಸುರೆನ್ಸ್ ಕಂಪನಿಯವರು ಐಗಳಿ ಗ್ರಾಮಕ್ಕೆ ಒಂದು ಅದೇ ಪಕ್ಕದ ಗ್ರಾಮಕ್ಕೆ ಇನ್ನೊಂದು ರೀತಿಯಾದ ಬೆಳೆ ಇಮೆ ಜಮಾ ಮಾಡುತ್ತಿದ್ದಾರೆ. ಪಕ್ಕದ ಗ್ರಾಮ ಕೋಹಳ್ಳಿ ಗ್ರಾಮದಲ್ಲಿ ಒಂದು ಎಕರೆಗೆ 70000 ರೂ.ಗಳು. ಜಮಾ ಮಾಡಿದ್ದಾರೆ
ಆದರೆ ಐಗಳಿ ಗ್ರಾಮದಲ್ಲಿ 34000 ಸಾವಿರ ಗಳನ್ನು ಮಾತ್ರ ಪ್ರತಿ ಎಕರೆಗೆ ಜಮಾ ನೀಡಿದ್ದಾರೆ ಈ ತಾರತಮ್ಯ ಸರಿಪಡಿಸಬೇಕು ಎಂದು ಕಳೆದ ವರ್ಷ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೆ ಇಲ್ಲಿವರೆಗೆ ಯಾರು ಸಹ ಗ್ರಾಮಕ್ಕೆ ಭೇಟಿ ನೀಡಿರುವುದಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ದ್ರಾಕ್ಷಿ ಬೆಳೆಗಾರರಿಗೆ ಅನ್ಯಾಯವಾಗಬಾರದು ತಾಲೂಕಿನಲ್ಲಿ ಪ್ರತಿ ಗ್ರಾಮದ ಬೆಳೆಗಾರರಿಗೆ ಸರಿಸಮನಾಗಿ ವಿಮೆ ಹಣವನ್ನು ಐಗಳಿ ಗ್ರಾಮದ ರೈತರಿಗೂ ನೀಡಬೇಕು.
ತಾರತಮ್ಯ ಬಗ್ಗೆ ಅಧಿಕಾರಿಗಳು ಖುದ್ದಾಗಿ ಐಗಳಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಗ್ರಾಮದ ಮುಖಂಡ ಸಿ ಎಸ್ ನೇಮಗೌಡ ಒತ್ತಾಯಿಸಿದರು. ಗ್ರಾಮಸ್ಥರ ಮನವಿ ಆಲಿಸಿದ ಶಾಸಕ ಲಕ್ಷ್ಮಣ್ ಸವದಿ ಅವರು ದೂರವಾಣಿ ಮೂಲಕ ತೋಟಗಾರಿಕೆ ಇಲಾಕೆ ಅಧಿಕಾರಿಗಳಿಗೆ ಮಾತನಾಡಿ ರೈತರಿಗೆ ಆಗುತ್ತಿರುವ ತಾರತಮ್ಯ ಸರಿಪಡಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಅಣ್ಣಾರಾಯ ಹಾಲಳ್ಳಿ ಅಪ್ಪ ಸಾಬ್ ಪಾಟೀಲ್ ಅಪ್ಪಾಸಾಬ್ ಮಾಕಾಣಿ ಯಲ್ಲಪ್ಪ ಮಿರ್ಚಿ ಪ್ರಹ್ಲಾದ ಪಾಟೀಲ್ ದೇವೇಂದ್ರ ಬೆಳಗಲಿ ಪ್ರಕಾಶ್ ಪಾಟೀಲ್ ಗುಂಡು ತೆಲಸಂಗ ಭರಮು ಬಿಜ್ಜರಗಿ ದ ದುಂಡಪ್ಪ ದೊಡ್ಡಮನಿ ಸೇರಿದಂತೆ ಇತರರು ಇದ್ದರು.
ವರದಿ :-ಆಕಾಶ ಮಾದರ