ಮಾನ್ವಿ : ಮಾನ್ವಿ ನಗರದಲ್ಲಿ ಸರಣಿ ಬೈಕ್ ಕಳ್ಳತನ ಹೆಚ್ಚುತ್ತಿರುವ ಬಗ್ಗೆ ಮಾನ್ವಿ ನಗರದ ಪೊಲೀಸರ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಮಾನ್ವಿ ನಗರದಲ್ಲಿ ಸರಿಸುಮಾರು ಮೂರು ತಿಂಗಳಲ್ಲಿ 50 ರಿಂದ 60 ಬೈಕ್ ಗಳು ಕಳ್ಳತನ ವಾಗಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲಈ ಬಗ್ಗೆ ಠಾಣೆಯ ಮೆಟಿಲೇರಿ ಬೈಕ್ ಕಳ್ಳತನವಾದ ಮಾಲೀಕರು ದೂರು ನೀಡಿದರು ಸಹ ಇವರಿಗೆ ಅವರಿಗೆ ಹಿಂತುರುಗಿದ್ದ ಬೈಕ್ ಕೆಲವೇ ಕೆಲವು.
ಸಂಘಟಿಕರಾದ ಅಂಬೇಡ್ಕರ್ ದಲಿತ ಸೇನೆ ಮಾಜಿ ಜಿಲ್ಲಾ ಅಧ್ಯಕ್ಷರಾದ ಗುರುರಾಜ್ ನಾಗಲಾಪುರ ಅವರು ಇಂದು ಎಸ್ಪಿ ಅವರನ್ನು ಭೇಟಿಯಾಗಿ ಅವರಿಗೆ ಒಂದು ವಿನಂತಿಯನ್ನು ಮಾಡಿದರು ಇದಕ್ಕೆ ಪ್ರತಿಯಾಗಿ SP ಅವರು ಮಾನ್ವಿ ಠಾಣೆಯ ಪಿ ಐ ವರಿಗೆ ಮಾಹಿತಿ ನೀಡಬೇಕು ಎಂದು ಹೇಳಿರುತ್ತಾರೆ.
ಗುರುರಾಜ್ ನಾಗಲಾಪುರವರು ಈ ಸಂದರ್ಭದಲ್ಲಿ ಮಾತನಾಡಿ ಮಾನವಿಯಲ್ಲಿ ಕಳ್ಳತನವು ಹೆಚ್ಚಾಗುತ್ತಿದ್ದು ಇದರ ಬಗ್ಗೆ ಕ್ರಮ ಕೈಗೊಂಡು ಸೂಕ್ತ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.ಮಾನ್ವಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕಾರ್ಯನಿರ್ವಹಣೆ ಬಂದಾಗಿರುತ್ತದೆ ಎಂದು ದೂರಿದರು ಇದನ್ನು ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕೆಂದು ಕೋರಿದರು.
ವರದಿ : ಶಿವ ತೇಜ