———————————————-ಚಿನ್ನದ ನಾಡಿಗೆ ಸಿಎಂ ಆಗಮನ
ಲಿಂಗಸುಗೂರು : ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರಾದ ಶ್ರೀ ಜೆ.ಟಿ.ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಆರ್.ಶಿಲ್ಪಾ ಅವರನ್ನು ಭೇಟಿ ಮಾಡಿ, ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಸಮನ್ವಯ ಸಮಿತಿ ವತಿಯಿಂದ ಮನವಿ ಪತ್ರ ನೀಡಿ, ದಿನಾಂಕ: 06.8.2025ರಂದು ಹಟ್ಟಿ ಚಿನ್ನದ ಗಣಿಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯದ ಹೆಮ್ಮೆಯ ನಾಡ ದೊರೆ ಗೌರವಾನ್ವಿತ* ಮುಖ್ಯಮಂತ್ರಿಯಾದ ಸನ್ಮಾನ್ಯ ಶ್ರೀಸಿದ್ದರಾಮಯ್ಯನವರು ಹಟ್ಟಿ ಚಿನ್ನದ ಗಣಿ ಕಂಪನಿಯಿಂದ 998 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರ್ಮಿಕರ ನೂತನ ವಸತಿ ಸಮುಚ್ಚಯ ನಿರ್ಮಾಣ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ಕ್ರೀಡಾಂಗಣ ನಿರ್ಮಾಣದ ಅಡಿಗಲ್ಲು ಸಮಾರಂಭಕ್ಕೆ ಆಗಮಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಸಮಸ್ತ ಕಾರ್ಮಿಕರಿಗೆ ವಿಶೇಷ ವೇತನ ಬಡ್ತಿ,(Special Increment) ಅಥವಾ ನೆನಪಿನ ಕಾಣಿಕೆ(Memorable Gift) ಹಾಗೂ ವೇತನ ಸಹಿತ ರಜೆ(Holiday With Wages) ಘೋಷಣೆ ಮಾಡುವಂತೆ ಕೋರಿ ಸಮಸ್ತ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗದ ಪರವಾಗಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಸಮನ್ವಯ ಸಮಿತಿ ವತಿಯಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ತಿಪ್ಪಣ್ಣ,ಪೆಂಚಲಮ್ಮ, ಹಾಜಿ ಬಾಬು, ಕುಪ್ಪಣ್ಣ, ಗಂಗಪ್ಪ, ಮೌನೇಶ್, ಗುರುರಾಜ್, ಅಮರೇಶ್, ಎಂ ಡಿ ಮುನಿರಿದ್ದೀನ್, ಗ್ಯಾನಪ್ಪ, ಹನುಮಂತರಾಯ, ಉಮಾಪತಿ ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




