ಬೆಳಗಾವಿ: ಶಾಲಾ ಆಡಳಿತಾತ್ಮಕ ದೃಷ್ಠಿಯಲ್ಲಿ ಹೆಚ್ಚುತ್ತಿರುವ ಕಾರ್ಯಾಭಾರವನ್ನು ಕಡಿಮೆ ಮಾಡಿ ಸಹಶಿಕ್ಷಕರಿಗೆ ಬಡ್ತಿ ನೀಡುಬೇಕು ಎಂದು ಆಗ್ರಹಿಸಿ ಕರ್ನಾಟಕ ಶಿಕ್ಷಣ ಸಂಘಗಳ ಪರಿಷತ್ತಿನ ಪದಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಅವರಿಗೆ ಸುವರ್ಣ ಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ರಾಜ್ಯದ ನೂರಾರು ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಶೀಘ್ರವೇ ಸಹ ಶಿಕ್ಷಕರಿಗೆ ಬಡ್ತಿ ನೀಡುವುದು ಹಾಗೂ ಈಗಾಗಲೇ ಅನೇಕ ಶಿಕ್ಷಕರು ಬಡ್ತಿಯಿಂದ ವಂಚಿತರಾಗಿ ನಿವೃತ್ತಿ ಹೊಂದಿರುತ್ತಾರೆ. ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಪಡಿಸುವುದು. ಮುಖ್ಯ ಶಿಕ್ಷಕರು ಎಪ್ರೀಲ್-ಮೇ ಬೇಸಿಗೆ ರಜೆ ಅವಧಿಯಲ್ಲಿ ಹಲವಾರು ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ 30 ದಿನಗಳ ಗಳಿಕೆ ರಜೆ ಮಂಜೂರು ಮಾಡುವುದು. ಸಿ&ಆರ್ ನಿಯಮವನ್ನು 2017 ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯಿಸದಿರುವುದು. 200ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಒಬ್ಬ ಡಿ. ದರ್ಜೆ ನೌಕರ ಹಾಗೂ ಎಸ್.ಡಿ.ಸಿ. ಹುದ್ದೆಯನ್ನು ಮಂಜೂರು ಮಾಡುವುದು ಮೊಟ್ಟೆ, ಬಾಳೆ, ಚಿಕ್ಕೆ ನೇರವಾಗಿ ಶಾಲೆಗೆ ಸರಬರಾಜು ಮಾಡಿಕೊಳ್ಳಲು ಸಾದ್ಯವಾಗದ ಶಾಲಾ ಮುಖ್ಯಸ್ಥರು ಮೇಲಿಂದ ಮೇಲೆ ಪೇಟೆಗೆ ಹೋಗುವ ಸಂದರ್ಭ ಬಂದೊದಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲು ವಿನಂತಿಸಿದರು,
ಅಲ್ಲದೇ ವಾರದಲ್ಲಿ 2 ದಿನದ ಬದಲಾಗಿ ಪ್ರತಿ ದಿನ ಮೊಟ್ಟೆ ಚಿಕ್ಕೆ ಬಾಳೆ ವಿತರಣೆ ಹಾಗೂ ಪ್ರತಿ ದಿನ ಪ್ರತಿ ಮಗುವಿನ ಸಹಿ ಪಡೆಯುವುದು ಮತ್ತು ಒಂದು ತರಗತಿಯಲ್ಲಿ 40-50 ಮಕ್ಕಳಿದ್ದರೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ವರ್ಗಭೋಧನೆಗೆ ತೊಂದರೆ ಉಂಟಾಗುತ್ತಿರುವುದು. ಪ್ರತಿ ದಿನ ಮಕ್ಕಳ ಆನ್ಲೈನ್ ಹಾಜರಾತಿ ಪೌಷ್ಠಿಕ ಆಹಾರದ ಆನ್ಲೈನ್ ಹಾಜರಾತಿ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನ್ಲೈನ್ ಮಾಹಿತಿಗಳನ್ನು ಕಡಿಮೆ ಮಾಡುವುದು. ಕೆಲವು ಶಾಲೆಗಳಲ್ಲಿ ಆನ್ಲೈನ್ ಮಾಹಿತಿ ಇಲ್ಲದಿರುವ ಶಿಕ್ಷಕರಿದ್ದು, ಮಾಹಿತಿಯನ್ನು ತುಂಬುವುದು ಬಹಳ ಕಷ್ಟಕರವಾಗಿದೆ. ಶಾಲಾ ಆಡಳಿತದ ಕಾರ್ಯವೈಖರಿಯಲ್ಲಿ ಹೆಚ್ಚಾಗಿ ಮುಖ್ಯ ಶಿಕ್ಷಕರು 50 ವಯಸ್ಸು ಮೇಲ್ಪಟ್ಟು ಇದ್ದು ಕಚೇರಿ ಕೆಲಸದ ಒತ್ತಡದಿಂದಾಗಿ ರಕ್ತದ ಒತ್ತಡ, ಮಧುಮೇಹ ಇತರೆ ಖಾಯಿಲೆಗಳಿಗೆ ತುತ್ತಾಗುತ್ತಿದ್ದು, ಹೆಚ್ಚಿನ ಶಿಕ್ಷಕರು 60 ವಯಸ್ಸಿನ ಮುಂಚೆಯೇ ನಿವೃತ್ತಿಯನ್ನು ಬಯಸಿದ್ದಾರೆ ಎಂದು ಮನವರಿಕೆ ಮಾಡಿದರು.
ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ ಇಬ್ಬರು ಶೌಚಾಲಯ ಸ್ವಚ್ಛಗೊಳಿಸುವ ಸಿಬ್ಬಂದಿಯನ್ನು ನೇಮಕ ಮಾಡಿ ಆ ವ್ಯಾಪ್ತಿಯ ಎಲ್ಲ ಶಾಲೆಗಳ ಶೌಚಾಲಯ ಸ್ವಚ್ಛಗೊಳಿಸುವುದು.ಪ್ರಾಥಮಿಕ ಶಾಲೆಗಳಲ್ಲಿ ಬಿ.ಎಡ್ ಪದವಿ ಹೊಂದಿದ ಶಿಕ್ಷಕರಿಗೆ ಪ್ರೌಢ ಶಾಲಾ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ 50% ಆದ್ಯತೆ ಮೂಲಕ ಶೀಘ್ರವೇ ಬಡ್ತಿ ನೀಡುವುದು. ಪ್ರೌಢ ಶಾಲೆಗಳಲ್ಲಿ ಎಮ್.ಎ, ಎಮ್.ಇ.ಇಡಿ ಹೊಂದಿದ ಶಿಕ್ಷಕರಿಗೆ ಪದವಿ ಪೂರ್ವ ಉಪನ್ಯಾಸಕರ ನೇಮಕಾತಿಯಲ್ಲಿ ಶೇ 50% ಆದ್ಯತೆ ನೀಡಿ ಮುಂಬಡ್ತಿ ನೀಡುವುದು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಶಿಕ್ಷಕರಿಗೆ ಇತರೆ ಕೆಲಸದ ಹೊರೆಯನ್ನು ಕಡಿಮೆ ಮಾಡುವುದು. ಸರ್ಕಾರಿ ಕನ್ನಡ ಶಾಲೆಗಳಲ್ಲಿ, ಇಂಗ್ಲೀಷ, ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಿದ್ದು, ಇಂಗ್ಲೀಷ ಬೋಧನೆಯ ಶಿಕ್ಷಕರನ್ನು ನೇಮಿಸಿಕೊಂಡು ಪ್ರಾರಂಭಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ರಾಜ್ಯಾಧ್ಯಕ್ಷರಾದ ಸಂಗಮೇಶ್ ಖನ್ನಿನಾಯ್ಕರ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಆರ್. ಎಸ್. ಹಿರೇಗೌಡರ ಮತ್ತು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಉಮೇಶ್ ಗೌರಿ