ಐಗಳಿ : ವಿಜಯಪುರ ಅಥಣಿ ರಾಜ್ಯ ಹೆದ್ದಾರಿಯಲ್ಲಿ ಬರುವ ಐಗಳಿ ಕ್ರಾಸ್ ರಸ್ತೆಯಲ್ಲಿ ರೋಡ್ ಬ್ರೇಕ್ ಹಾಕಿಸಲು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳೆ ಅವರಿಗೆ ಐಗಳಿ ಕಾಂಗ್ರೆಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಸಚಿವರು ವಿಜಯಪೂರ ದಿಂದ ಅಥಣಿಗೆ ಆಗಮಿಸುವ ಮಾರ್ಗ ಮಧ್ಯ ಐಗಳಿ ಕ್ರಾಸ್ ನಲ್ಲಿ ಸಚಿವರಿಗೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸನ್ಮಾನಿಸಿ ಮನವಿ ಸಲ್ಲಿಸಿದರು. ನೂತನವಾಗಿ ಪಕ್ಕಾ ರಸ್ತೆಯಾಗಿದ್ದು ದಿನ ನಿತ್ಯ ಸಾವಿರಾರು ವಾಹನಗಳು ಓಡಾಟ ಮಾಡುತ್ತಿದ್ದು ರಸ್ತೆಯ ಅಪಘಾತದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಇದಕ್ಕೆ ಕಾರಣ ವಾಹನಗಳ ಸ್ಪೀಡ್ ಲಿಮಿಟೆಡ್ ಇಲ್ಲದೆ ಇರುವುದು ಹಾಗೂ ರೋಡ್ ಬ್ರೇಕ್ ಹಾಕದೆ ಇರುವುದುಕ್ಕೆ ಅಪಘಾತಕ್ಕೆ ಅವಕಾಶ ಮಾಡಿಕೊಟ್ಟತ್ತಾಗಿದೆ ತ್ವರಿತವಾಗಿ ರೋಡ್ ಬ್ರೇಕ್ ಹಾಕಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲು ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಾಳ ಮುಜಾವರ ಅಪ್ಪಸಾಬ ಪಾಟೀಲ ಬೈರು ಬಿಜ್ಜರಗಿ ಸೌಕತ ಮುಜಾವರ ಮುನೀರ ಮುಜಾವರ ಪರಗೊಂಡ ಬಿರಾದರ ಕಾರ್ಯಕರ್ತರಾದ ಈಶ್ವರ ದಳವಾಳಿ ಸಂಜು ಸಾವತ ಪರಗೊಂಡ ಬಿರಾದರ ಅಕ್ಷಯ ತೆಲಸಂಗ ಅಪ್ಪಸಾಬ ಮಾದರ ಸಚೀನ ಮಾದರ ಮಹೇಶ ಮಾದರ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು .
ವರದಿ : ಆಕಾಶ ಎಮ್




