Ad imageAd image
- Advertisement -  - Advertisement -  - Advertisement - 

ರಾಜ್ಯಪಾಲರ ವಿರೋಧ ತಾಲೂಕಾ ಕಾಂಗ್ರೆಸ್ ಸಮಿತಿಯಿಂದ ರಾಷ್ಟ್ರಪತಿಗಳಿಗೆ ಮನವಿ

Bharath Vaibhav
ರಾಜ್ಯಪಾಲರ ವಿರೋಧ ತಾಲೂಕಾ ಕಾಂಗ್ರೆಸ್ ಸಮಿತಿಯಿಂದ ರಾಷ್ಟ್ರಪತಿಗಳಿಗೆ ಮನವಿ
WhatsApp Group Join Now
Telegram Group Join Now

 ರಾಮದುರ್ಗ:-ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಾ ಪಂಚಾಯತ್ ಕಚೇರಿಯಿಂದ ಶಕ್ತಿ ಪಿಠವಾದ ತಹಸೀಲ್ದಾರ್ ಕಚೇರಿವರಿಗೆ ಕರ್ನಾಟಕ ರಾಜ್ಯಪಾಲ ವಿರೋಧ ರಾಮದುರ್ಗ ತಾಲೂಕಾ ಕಾಂಗ್ರೆಸ್ ಸಮಿತಿ ಹಾಗೂ ಶಾಸಕ ಅಶೋಕ ಪಟ್ಟಣ ನೆತ್ರೋತ್ವದಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡಸಿ ತಹಸೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ನಂತರ ಶಾಸಕ ಹಾಗೂ ಸರಕಾರದ ಮುಖ್ಯಸಚೇತಕ್ ಅಶೋಕ ಪಟ್ಟಣ ಮಾತನಾಡಿದರು,ಗೌರವಾನ್ವಿತ ಕರ್ನಾಟಕದ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಮಂಜೂರಾತಿಯನ್ನು ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸಲು ತಕ್ಷಣದ ಮಧ್ಯಸ್ಥಿಕೆ ವಹಿಸಬೇಕು.

ನಾವು ಕರ್ನಾಟಕದ ಜನರು, ಅತ್ಯಂತ ಗೌರವ ಮತ್ತು ಆಳವಾದ ಕಾಳಜಿಯಿಂದ, ನಮ್ಮ ಪ್ರಜಾಪ್ರಭುತ್ವದ ಮೂಲತತ್ವ ಮತ್ತು ನಮ್ಮ ಮಹಾನ್ ರಾಷ್ಟ್ರವನ್ನು ನಿರ್ಮಿಸಿರುವ ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ತರುವ ಘೋರ ಅನ್ಯಾಯ ಮತ್ತು ರಾಜಕೀಯ ಪ್ರೇರಿತ ಕೃತ್ಯದ ಬಗ್ಗೆ ತಕ್ಷಣ ಗಮನ ಸೆಳೆಯಬೇಕು.

ಕರ್ನಾಟಕದ ರಾಜ್ಯಪಾಲರು, ಸಂವಿಧಾನ ಬಾಹಿರವಾದ ಕ್ರಮದಲ್ಲಿ,ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಮರುದಿನ ಕೈಗೊಂಡಿರುವ ಈ ಕ್ರಮವು ಕೇವಲ ಕರ್ನಾಟಕದ ಚುನಾಯಿತ ಸರ್ಕಾರದ ಮೇಲೆ ನೇರ ದಾಳಿಯಾಗಿರದೆ, ಕರ್ನಾಟಕದ ಜನತೆಯ ಜನಾದೇಶ ಪಡೆದಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಲೆಕ್ಕಾಚಾರದ ಷಡ್ಯಂತ್ರವಾಗಿದೆ ರಾಜಕೀಯ ದ್ವೇಷ ಮತ್ತು ರಾಜ್ಯಪಾಲರ ಕಚೇರಿಯ ದುರುಪಯೋಗ ಬಿಜೆಪಿ ಮಾಡಿದೆ.

ರಾಜ್ಯಪಾಲರ ನಿರ್ಧಾರವು ಕೇಂದ್ರ ಸರ್ಕಾರದ ರಾಜಕೀಯ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ ಎಂಬುದು ಸ್ಪಷ್ಟವಾಗಿದೆ. ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಸೇರಿದಂತೆ ಅದರ ಮಿತ್ರಪಕ್ಷಗಳು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿ ಕೊಂಡಿದ್ದಾರೆ, ಜನರ ಕಲ್ಯಾಣಕ್ಕಾಗಿ ಸತತವಾಗಿ ಶ್ರಮಿಸಿದ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ, ಇವರ ಆಟ ಯಾವುದು ನಡೆಯಲ್ಲ ಎಂದು ಹೇಳಿದರು.

ಈ ಸಂಧರ್ಭದಲ್ಲಿ ರಾಮದುರ್ಗ ತಾಲೂಕಾ ಕಾಂಗ್ರೆಸ್ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ಪುರಸಭೆ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
Share This Article
error: Content is protected !!