Ad imageAd image

ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಪ್ರಧಾನಿಗೆ ಮನವಿ

Bharath Vaibhav
ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಪ್ರಧಾನಿಗೆ ಮನವಿ
WhatsApp Group Join Now
Telegram Group Join Now

ಮಾನ್ವಿ: ಕಾರ್ಮಿಕ ಸಂಘಗಳ ಜಂಟಿ ಸಮಿತಿ ತಾಲೂಕು ಘಟಕದ ವತಿಯಿಂದ ಪ್ರಧಾನ ಮಂತ್ರಿಗಳಿಗೆ ತಹಸೀಲ್ದಾರ್ ಭಿಮರಾಯ .ಎಸ್.ರಾಮಸಮುದ್ರ ರವರ ಮೂಲಕ ಮನವಿ ಸಲ್ಲಿಸಿ ತಾ.ಅಧ್ಯಕ್ಷ ಹೆಚ್. ಶರ್ಪುದ್ದೀನ್ ಪೋತ್ನಾಳ್ ಮಾತನಾಡಿ ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದು ಪಡಿಸಬೇಕು. ರಾಜ್ಯ ಸರ್ಕಾರ ರೈತರ ಒಪ್ಪಿಗೆ ಇಲ್ಲದೆ ಬಲವಂತದ ಭೂ ಸ್ವಾಧೀನ ಹಾಗೂ 3 ಕರಾಳ ಕೃಷಿ ಕಾಯಿದೆ ತಿದ್ದಪಡಿಗಳನ್ನು ವಾಪಸ್ಸು ಪಡೆಯಬೇಕು, ಎಲ್ಲಾ ಕಾರ್ಮಿಕರಿಗೆ ಸಮಾನವಾಗಿ ರಾಷ್ಟç ವ್ಯಾಪಿಯಾಗಿ 26 ಸಾವಿರ ರಾಜ್ಯವ್ಯಾಪಿಯಾಗಿ 36 ಸಾವಿರ ಕನಿಷ್ಟ ವೇತನ ನಿಗದಿ ಪಡಿಸಬೇಕು.ಗುತ್ತಿಗೆ ಮುಂತಾದ ಕಾರ್ಮಿಕರಿಗೆ ಕೇಲಸಕ್ಕೆ ತಕ್ಕಂತೆ ಸಮಾನ ವೇತನ ನೀಡಬೇಕು.

ಎಲ್ಲಾ ಅಸಂಘಟಿತ ಕಾರ್ಮಿಕರಿಗೆ, ಕೃಷಿ.ತೋಟಗಾರಿಕೆ ಕಾರ್ಮಿಕರಿಗೆ 9 ಸಾವಿರ ಕನಿಷ್ಠ ವೇತನ ನಿಗದಿ ಪಡಿಸಬೇಕು,ಪಿಂಚಣಿ, ಸಾಮಾಜಿಕ ಭದ್ರತೆ ಯನ್ನು ಖಾತ್ರಿ ಪಡಿಸಬೇಕು.ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು, ರಾಜ್ಯ ಸರ್ಕಾರವು ಕಾರ್ಮಿಕರ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ನಿಗದಿಪಡಿಸಬೇಕು, ದುಡಿಯುವ ಮಹಿಳೆಯರಿಗೆ ವಾರ್ಷಿಕ 12 ದಿನ ವೇತನ ಸಹಿತ ಮುಟ್ಟಿನ ರಜೆ ನೀಡಬೇಕು.ಬೆಂಗಳೂರಿನಲ್ಲಿ ಪ್ರತಿಭಟನೆ ಮತ್ತು ರ‍್ಯಾಲಿ,ಮೆರವಣಿಗೆಗೆ ಇರುವ ನಿರ್ಬಂಧಗಳನ್ನು ಹಿಂಪಡೆಯಬೇಕು.ರಾಯಚೂರು ನಗರದಲ್ಲಿಯೇ ಏಮ್ಸ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಬಸವ ವೃತ್ತದಲ್ಲಿ ಪ್ರತಿಭಟನೆ ಧರಣಿ ನಡೆಸಿ ನೂರಾರು ಕಾರ್ಮಿಕ ಮುಖಂಡರು,ಕಾರ್ಯಕರ್ತರು,ಅAಗನವಾಡಿ,ಕಟ್ಟಡಕಾರ್ಮಿಕರ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ರುದ್ರಪ್ಪನಾಯಕ, ಸಿದಲಿಂಗಯ್ಯ, ಶೈಲಾಜ,ಆಶಾ,ಅಂಬಣ್ಣ ನಾಯಕ ಬ್ಯಾಗವಾಟ್, ಆಂಜನೇಯ್ಯ ಕೋಟೆ, ಆಂಜನೇಯ್ಯ ಮಾಡಗಿರಿ, ಎಂ.ಬಿ. ಸಿದ್ದರಾಮಯ್ಯಸ್ವಾಮಿ, ಚನ್ನಬಸವ ಜಾನೇಕಲ್, ಚನ್ನಮ್ಮ, ಲಕ್ಷಿö್ಮÃ ಪೆರಿಕಲ್ ,ಶರಣಬಸವ ,ಎಂ.ಡಿ. ಇಮಾಮ್, ರಾಮಣ್ಣ, ಹನುಮಂತು,ಬಸವರಾಜ, ವೆಂಕಟೇಶಮ ರಮೇಶಬಾಬು, ಶ್ರೀನಿವಾಸ, ರಫಿಖಾದರ್ ಸಾಬ್,ಬಸವರಾಜ, ಹನುನಂತು,ಚAದ್ರ ಸೇರಿದಂತೆ ಕಾರ್ಮಿಕ ಸಂಘಟನೆಗಳ ಮುಖಂಡರು ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!